Posts

Showing posts from October, 2017

ನಾ ಕೆಂಪು ಬಸ್ಸು

ನಾ ಕೆಂಪು ಬಸ್ಸು ~~~~~~~~~ ದಿನ ದಿನವೂ ದುಡಿದು ಬಸವಳಿಯುತ್ತಿದ್ದೆ ಕ್ಷಣ ಕ್ಷಣವೂ ನಡೆದು ನಲಿದಾಡುತ್ತಿದ್ದೆ ಹೀಗೆ ಹೋಗಿ ಹಾಗೆ ಬಂದು ಮತ್ತೆ ಮತ್ತೆ ಬಂದು ಹೋಗಿ ದುಡಿಮೆ ಮಾಡುತ್ತಿದ್ದೆ ||ಪ|| ಯಾರೋ ಮಾಡಿದ ತಪ್...

ಜಗ ನಿನದೇ

ಜಗ ನಿನದೇ ~~~~~~~ ನಿನಗೆ ಏನ ನೀಡಲಿ ತಂದೆ ನಿನ್ನ ಅನುಗ್ರಹದಿಂ ಬಂದೆ ನಿನ್ನದೇ ನಿಮಿತ್ತಕೆ ಇಳಿಸಿದೆ ನಿನ್ನ ಮನದಿಚ್ಚೆ ಕುಣಿಸಿದೆ ಅಲ್ಪ ನಾನೇನನೂ ಬೇಡದೇ ನೀಡುವ ಮನವ ಮಾಡಿದೆ ನಿನ್ನ ನಾನರಿಯದೇ ಹೋದೆ ಅದು ಇದೇ ಬೇಕೆಂದು ಎಂದೆ ನಿನ್ನ ಕೊಡುಗೈಯ ಮುಂದೆ ಬಲು ಎಳೆಯನು ನಾ ತಂದೆ ಚಿನ್ನವೆ ಬೇಕೆಂದು ಬೇಡಿದೆ ತುತ್ತು ಅನ್ನವ ನೀ ನೀಡಿದೆ ಜಗಜ್ಯೋತಿಯು ನೀನೇ ತೃಣಮಾತ್ರವು ನಾನೇನೆ ನಾನೇನು ನೀಡಲಾರನೇ ಅಣುರೇಣುವೂ ನಿನದೇನೆ ವೈಲೇಶ ಪಿ ಯೆಸ್ ಕೊಡಗು ಚಾಲಕ ಕರಾರಸಾಸಂಸ್ಥೆ ಮಡಿಕೇರಿ ೧/೧೧/೨೦೧೭

ನೆನಪು

ನೆನಪು $$$$$$$$$$$$$$$$$$$ ಬಾಳಿ ಬದುಕಿದ್ದ ಹೆಗ್ಗುರತಾಗಿ ಮನದ ಬಯಕೆಗೂ ಹೊರತಾಗಿ ಬೇಡಿಕಾಡಿ ಕಾಡಿಸಿ ಮತ್ತೊಮ್ಮೆ ಮಗದೊಮ್ಮೆ ಬಯಸಿ ಬಸಿರ ಬಯಕೆಯ ಮುಗಿಸಿ ಇಹಕೆ ಕಂದನ ಇಳಿಸಿ ಕನವರಿಸಿ ಕಣ್ಮುಚ್ಚಿದಳು ಅಮ್ಮ ಕರೆದಾ...

ಗಝಲ್ ೩

ಗಝಲ್ ೩ ~~~~~~~ ಅಂದ ಚೆಂದ ತುಂಬಿದ ಆನಂದ ಚಂದಿರ ನಮ್ಮ ನುಡಿ ಕನ್ನಡ ಅರಳು ಹುರಿದಂತೆ ಮನವು ಮಿಡಿವಂತೆ ನುಡಿಯೆ ನಮ್ಮ ನುಡಿ ಕನ್ನಡ ಮಾಮರದ ಕೋಗಿಲೆ ಧನಿಯಂತೆ ಮನಕೆ ತಂಪನ್ನೀವ ನುಡಿ ಕನ್ನಡ ಮಾತೆಯ ಜೋಗುಳಕೆ ಮೈಮ...

ಸಣ್ಣ ಕಥೆ

ಸಣ್ಣ ಕಥೆ ~~~~~ ಗೋಪಿ ಹದಿಹರೆಯದ ಯುವಕನಾದರೂ ಬಡತನದಲ್ಲಿ ಬೆಳೆದು ತಮ್ಮ ತಂಗಿಯರ ವಿದ್ಯೆಗೆ ಮೂರು ಹೊತ್ತು ಕೂಳಿಗೆ ಅಮ್ಮನಿಗೆ ಹೊರೆಯಾಗಬಾರದೆಂದು ವಿದ್ಯೆಯನ್ನು ಮೊಟಕುಗೊಳಿಸಿ  ಹೊರ ಊರಿನ ಹಾದಿ ಹಿಡಿದ...

ಸಮವೇ ಸುಮ

ಸಮವೇ ಸುಮ ~~~~~~~~~ ಸುಮದ ಸುಕೋಮಲ ಭಾವ ಮೃದು ಮಧು ಮಧುರ ಸಾರ ದೇವ ದೇವಿ ಮುಡಿಯ ಹಾರ  ಅರಿತು ನೋಡೆ ಜೀವನ ಸಾರ ಅರಿಯದೇ ಮುಳ್ಳಿನ ಸಂಗ ಬಿಡಲಾರದ ದಾರದ ಸಂಗ ಸುಮಾಗಮ ಘಮದ ಅಂಗ ಅದಕ್ಕಿಲ್ಲ ಯಾವುದೇ ಭಂಗ ಎಲ್ಲಿಟ್ಟರೂ ಅವಿನಾವ ಭಾವ ಏಕದಿನದಿ ಬಾಡಿತದು ಜೀವ ಸಾರ್ಥಕ ಬಾಳಿನ ಅನುಭಾವ ನಿಷ್ಕಲ್ಮಸ ಪ್ರೀತಿಯ ಅನುಭವ ವೈಲೇಶ ಪಿ ಯೆಸ್ ಕೊಡಗು ಚಾಲಕ ಕರಾರಸಾಸಂಸ್ಥೆ ಮಡಿಕೇರಿ ೨೮/೧೦/೨೦೧೭

ಭಾವ × ಬತ್ತಿ

ಭಾವ × ಬತ್ತಿ ~~~~~~~ ಕವಿ ಭಾವ ಜೀವಿ ಭಾವ ಕವಿ ಜೀವ ಕವಿ ಬೇಡಿಕೆ ಕಿವಿ ಕಿವಿ ಮೆಚ್ಚುಗೆ ಕವಿ ಕಿವಿ ಓದಿ ರಸಸ್ವಾದ ಕವಿ ನುಡಿಯೆ ವೇದ ನಿಜ ಕವಿಗಿಲ್ಲ ಭೇದ ನಿಜ ಕಿವಿಗೆ ಮೋದ ಸ್ವಾದ ಅರಿಯುವ ಕಿವಿ  ಸವಿಯುತ ಕವಿತೆ ಓದಿ ತಾನಾಗ ಬಯಸಿ ಕವಿ ಭಾವ ಚಿಮ್ಮಿದರೆ ಕವಿ ಬಿರಿಯದಿರೆ ಸುಮ್ಮನಿರಿ ಅಪಹರಿಸಿ ಭಾವದ ಸಿರಿ ಕೃತಿಚೌರ್ಯ ಅಲ್ಲ ಶೌರ್ಯ ಕವಿಮನಕೆ ಎಸಗಿದ ಕೌರ್ಯ ಸರಿಯಲ್ಲ ತಮ್ಮ ಈ ಕಾರ್ಯ. ವೈಲೇಶ ಪಿ ಯೆಸ್ ಕೊಡಗು ಚಾಲಕ ಕರಾರಸಾಸಂಸ್ಥೆ ಮಡಿಕೇರಿ ೨೮/೧೦/ ೨೦೧೭

ನಾನು ನೀನು

ಜಗದ ನೋಟಕೆ ನಾನು ನೀನು. ನಿಜ ಸತಿಪತಿಗಳಾದರೇನು. ನನಗೆ ನೀನು ನಿನಗೆ ನಾನು. ನನಗೆ ನೀನು ನಿನಗೆ ನಾನು. ನಾವೇ ಹಡೆದ ಮುದ್ದು ಕಂದಮ್ಮಗಳಲ್ಲವೇನು.                                    !!ಪಲ್ಲವಿ!! ಮದುವೆಯ...

ನಾನೊಂದು ಕಂದಾ

ನಾನೊಂದು ಮುದ್ದು ಮುದ್ದಾದ ಕಂದ ಎನ್ನ  ಕಂಡರೆ ಅಬಾಲವೃದ್ದರಾದಿಯಾಗಿ ಎಲ್ಲರಿಗೂ ಮಹದಾನಂದ ಕಚ್ಚಿ ಕಚ್ಚಿ ನುಡಿಯುತ್ತಿಹರು ಮುದ್ದು ಕಂದ ಅಪ್ಪನೆಂದರು ನಮ್ಮೂರಲ್ಲಿ ನಾ ಬಲು ಚೆಂದ ಅಮ್ಮನ ಪ್ರೀತಿಯ  ...

ಗಝಲ್ ೨

ಗಝಲ್ ೨ ~~~~~~~ ಕರೆಯದೇ ಬಂದವನು ನೀನೇ ಗೆಳೆಯ ಮರು ನುಡಿಯದೇ ನಡೆದವನು ಸಹ ನೀನೇ ಗೆಳೆಯ ನಿನಗಾಗಿ ನಿನ್ನ ಏಳಿಗೆಗಾಗಿ ಏನೇನೆಲ್ಲಾ ನುಡಿದೆ ನೀನು ನೀನಾಗುವ ಮುನ್ನ ಮಿಥ್ಯೆಯ ಅರುಹಿದವ ಸಹ ನೀನೇ ಗೆಳೆಯ  ಅನ್ಯರ ನುಡಿಗೆ ನಿನ್ನ ನೀನೇ ಮಾರಿಕೊಂಡೆ ಅರುಹಿದವರ ಒಳಗುದಿಯ ಅರಿಯದೇ ಹೋದವನು ಸಹ ನೀನೇ ಗೆಳೆಯ ಶಾಂತ ಸರೋವರಕೆ ಕಲ್ಲನ್ನು ಎಸೆದೆ ಸರೋವರದಿ ಅಡಗಿದ ಬೇಗುದಿಯ ಮರೆತವನು ಸಹ ನೀನೇ ಗೆಳೆಯ  ಈ ಧರೆಯೊಳು ಇದೆಲ್ಲವೂ ನಿತ್ಯವೆಂದು  ನೀನಂದೆ ನಿನ್ನೊಳ ಮಿಥ್ಯೆಯ ನಿನಗರಿಯದೇ ಹೊರ ತಂದವನು‌ ಸಹ ನೀನೇ ಗೆಳೆಯ "ಸಿಡಿಲು" ನ ಆಗಸದಿ ಚುಕ್ಕಿಯಾಗುವ ಅವಕಾಶ ಇತ್ತು. ಆಗಸದ ಚುಕ್ಕಿಯಾಗದೆ ಕಪ್ಪು ಚುಕ್ಕಿಯಾದ ಮಸಿ ಸಹ ನೀನೇ ಗೆಳೆಯ "ಸಿಡಿಲು" ವೈಲೇಶ ಪಿ ಯೆಸ್ ಕೊಡಗು ಚಾಲಕ ಕರಾರಸಾಸಂಸ್ಥೆ ಮಡಿಕೇರಿ ೨೫/೧೦/೨೦೧೭

ನಡೆದವರು

ನಡೆದವರು ~~~~~~ ಕರೆಯದೇ ಬಂದರು ಮನದಲ್ಲಿ ನಿಂದರು ಮನದಂತೆ ಅಂದರು ಅವರಂತೆ ಬೆಂದರೂ ನುಡಿಯದೇ ನಡೆದರು ಅವರಾಗೇ ಕರೆದರು ಅವರಿಚ್ಚೆ ಹೇರಿದರು ಮನವನ್ನೇ ತೊಳೆದರು ಕೊಳೆಯ ತುಂಬಿದರು ಬಳಿಯಿಂದ ತಳ್ಳಿದರು ಯಾರೇನೇ ಅಂದರೂ ಮನವನ್ನು ಅರಿಯರು ಮಾತಿಗೆ ಸರಿ ನಡೆಯರು ನಮಗೆ ನಾವೇ ಒಡೆಯರು ಇದನ್ನೆಂದೂ ಮರೆಯದಿರ ಸಿಡಿಲು  ವೈಲೇಶ ಪಿ ಯೆಸ್ ಕೊಡಗು ಚಾಲಕ ಕರಾರಸಾಸಂಸ್ಥೆ ಮಡಿಕೇರಿ ೨೫/೧೦/೨೦೧೭

ಚಟ ಚಟ್ಟ

ಚಟ ಚಟ್ಟ ~~~~~~~~~~~ ಅವನೊಬ್ಬ ಇದ್ದ ಕುಡುಕ ಸಂಸಾರ ಎಂದರೆ ಸಿಡುಕ ಕುಡಿದೇ ಇದ್ರೆ ಕೈ  ನಡುಕ ಬೆಳಗ್ಗೆದ್ದು ಹೆಂಡ ಹುಡುಕ ತಿಂಡಿ ಒಂದು ಮನೆಯಲ್ಲಿ ಮಧ್ಯಾಹ್ನ ಊಟ ಕೊಟ್ಟಲ್ಲಿ ತೂರಾಡುತ್ತಾ  ಬೀದಿಯಲ್ಲಿ ರಾತ್ರಿ ಮಾತ್ರ ಚರಂಡಿಯಲ್ಲಿ ಯಾರದೇ ಕೆಲಸ ಮುಗಿಸಿ ಕೊಟ್ಟ ಕಾಸು ಜೇಬಿಗೆ ಇಳಿಸಿ ಹುಟ್ಟು ಗುಣ ಬಿಡದ ದೈನೇಸಿ ಕುಡಿತ ಬಿಡಲಾರದ ಬೇವರ್ಸಿ ಮನೇಲಿ ಮಲಿಗಿದ್ದು ಕನಸು ಮಲಗಿದ ಮನೆಯಲಿ ಸುಸ್ಸು ಏನೇ ಆದರೂ ಗಟ್ಟಿ ಪಿಂಡ ಅನಾಥನಂತೆ ಸಾವು ಕಂಡ ವೈಲೇಶ ಪಿ ಯೆಸ್ ಕೊಡಗು ಚಾಲಕ ಕರಾರಸಾಸಂಸ್ಥೆ ಮಡಿಕೇರಿ ೨೫/೧೦/೨೦೧೭

ಚುಟುಕು

(ಚುಟುಕು) ಮನ ಮೆಚ್ಚಿದ ಹುಡುಗಿ ಕೊಡಗಿನ ಬೆಡಗಿ ಮನ ಮೆಚ್ಚಿದ ಹುಡುಗಿ ಅವರಪ್ಪ ಬಡಗಿ ಕೇಳ ಹೋದೆನು ಹುಡುಗಿ ಸಿಟ್ಟಿಗೆದ್ದು ಅವರಪ್ಪ ತಂದನಾ ಬಡಿಗಿ.. ವೈಲೇಶ ಪಿ ಯೆಸ್ ಕೊಡಗು ಚಾಲಕ ಕರಾರಸಾಸಂಸ್ಥೆ ಮಡಿಕೇರ...

ಪ್ರಕೃತಿ ದೌರ್ಜನ್ಯ

ಪ್ರಕೃತಿ ದೌರ್ಜನ್ಯ ₩₩₩₩₩₩₩₩ ಗಜಪಡೆಯು ಬಂದಿತ್ತಾ ತೋಟವನೇ ನುಂಗಿತ್ತಾ ಎಂದರೆ ಗಜಪಡೆಯ ತಪ್ಪೇನು? ಗಜನಡೆವ ಹಾದಿಯಲಿ ಬೇಲಿಯನು ನೆಟ್ಟವರು ತೋಟವನು ಗೈದವರು ನಾವೇ ಅಲ್ಲವೇನು? ಚಿರತೆಯು ಬಂದಿತ್ತಾ ...

ಕರುನಾಡು

ಕರುನಾಡು ~~~~~~ ಕರುನಾಡು ಸಕಲ ಐಸಿರಿಯ ಬೀಡು ಕರುಣೆಯ ಹೆಸರು ಪಡೆದಿಹ ನಾಡು ಹಚ್ಚಿದರೆ ಹಸ್ತ ಹೊನ್ನಾಗುವ ನಾಡು ತಂಗಾಳಿ ಅಲೆಯಲಿ ಶ್ರೀ ಗಂಧದ ಬೀಡು ಕಂದಾ ಎಂದು ಕರೆವ ಅಮ್ಮನ ನುಡಿ ಕಂದಗೆ ಅಮ್ಮನ ಮಡಿಲೆ ದೇವರ ಗುಡಿ ಎನಿತು ಇನಿತಾಗಿಹುದು ನುಡಿ ಕನ್ನಡ  ಸಾವು ಬಂದರೂ ಸತ್ಯವನೆ ನೀ ನುಡಿ ಕವಿ ಕೋಗಿಲೆಗಳ ಹಾಡು ನೀಡಿದ ಪಾಡು ಹರಿವ ತೊರೆಯ ಝುಳು ಝುಳು ಹಾಡು ಶರದಿಯ ಸಮವುಂಟೆ ಸರಿಯಲಿ‌ ಜಾಡು ಸಕಲವ ಸವಿದು ಸಿಹಿ ಕನಸಲಿ ಈಜಾಡು ಜೋಕಾಲಿ ಜೀಕುತಾ ಜೋಗುಳವ ಕೇಳಿ ಮಗು ಮೈಮರೆತು ನಿಲ್ಲಿಸಿ ತನ್ನೆಲ್ಲಾ ಕೇಲಿ ಕನ್ನಡದ ರಾಗ ರಂಜನೆಗೆ ತಲೆದೂಗಿ ತಾಲಿ ಕೈಯಲ್ಲಿ ಹಿಡಿದು ಹೊಡೆಯದಂತೆ ಜೋಲಿ ಸ್ಥಬ್ದವಾಯಿತು ಚೀರಾಡಿದ ಮನದ ಖೋಲಿ ವೈಲೇಶ ಪಿ ಯೆಸ್ ಕೊಡಗು ಚಾಲಕ ಕರಾರಸಾಸಂಸ್ಥೆ ಮಡಿಕೇರಿ ೨೦/೧೦/೨೦೧೭

ನಾನು ನೀನು

ನಾನು ನೀನು ~~~~~~~~ ಜಗದ ನೋಟಕೆ ನಾನು ನೀನು. ನಿಜ ಸತಿಪತಿಗಳಾದರೇನು. ನನಗೆ ನೀನು ನಿನಗೆ ನಾನು. ನನಗೆ ನೀನು ನಿನಗೆ ನಾನು. ನಾವೇ ಹಡೆದ ಮುದ್ದು ಕಂದಮ್ಮಗಳಲ್ಲವೇನು.                                    !!ಪಲ್...

ನ್ಯಾನೋ ಕಥೆಗಳು ೨

ನ್ಯಾನೋ ಕಥೆಗಳು @@@@@@@@ ತಾರಮ್ಮಯ್ಯ ~~~~~~~ ಗೆಳೆಯ ಇನಿಯ ನೀನೆ ಸರ್ವಸ್ವ ನೀನೇ ಮಿನುಗುವ ನಕ್ಷತ್ರ ಎಂದಳು ತನ್ನ ಅಗತ್ಯ ಪೂರೈಕೆಗಾಗಿ. ಅವಶ್ಯಕತೆ ಮುಗಿದಾಗ  ತಾರಮ್ಮಯ್ಯ ತೋರಿಸಿ ನಡೆದಳು. ಮುಂದಿನ ಬೇಟೆಗಾಗಿ. ಚಿ...

ಹಣತೆ ವೃಷ್ಠಿ

ಹಣತೆ ವೃಷ್ಠಿ ~~~~~~~ ಮನುಜ ಹಚ್ಚಿದ ಹಣತೆಯ ಗತಿ ನೋಡಿ ಸೀಮಿತ ವೆಚ್ಚದ ತೈಲ, ಹತ್ತಿಯ ಬತ್ತಿಯ ತುದಿಯ ಅಗ್ನಿ, ಬತ್ತಿದ ಹಣತೆಯ ತಳದಿ ಸೇರಿ ಉರಿದು ಕತ್ತಲ ಜೊತೆಗೆ ಸೆಣೆಸಾಡಿ ಆರಿ ಹೋಗಿದೆ ಬೆಳಗೆದ್ದು ನೀವೇ ನೋಡಿ...

ಶಾಯಿರಿಗಳು ಭಾಗ ೨

ಶಾಯಿರಿಗಳು ~~~~~~~ ಕಡಲು ಒಡಲು ~~~~~~~~ ರವಿಕಿರಣದ ಚುಂಬನಕೆ ಬಸಿರಾಯ್ತು ಕಡಲು. ಹನಿಗೂಡಿ ಕರಿಮೇಘ ನೂರಾಯ್ತು ಆಗಸದೊಡಲು ಮೇಘಗಳ ಚುಂಬನಕೆ ಸುರಿದ ಮಳೆಗೆ ಹಸಿರಾಯ್ತು ಬುವಿಯೊಡಲು ಹರಿದ ನೀರದು ನದಿಯಾಗಿ ಮತ್ತೆ ಸ...

ಕರುನಾಡು

ಕರುನಾಡು ~~~~~~ ಕರುನಾಡು ಸಕಲ ಐಸಿರಿಯ ಬೀಡು ಕರುಣೆಯ ಹೆಸರು ಪಡೆದಿಹ ನಾಡು ಹಚ್ಚಿದರೆ ಹಸ್ತ ಹೊನ್ನಾಗುವ ನಾಡು ತಂಗಾಳಿ ಅಲೆಯ ಶ್ರೀ ಗಂಧದ ಬೀಡು ಸಕಲ ಕಲೆಯ ಕಲಿತು ಸಂಗೀತ ಹಾಡು ಕಂದಾ ಎಂದು ಕರೆವ ಅಮ್ಮನ ನುಡಿ ...

ಆದಿ ಕುಲ ದೇವಿ ಕಾವೇರಿ

ಆದಿ ಕುಲದೇವಿ ಕಾವೇರಿ ~~~~~~~~~~~~~ ವಿಶಿಷ್ಟ ಜನಾಂಗದ ಅಮ್ಮೆ ಆದಿ ಕುಲ ದೇವಿ ಕೊಡಗಿನ ಕೊಡವರ ಮಾತೆ ಶ್ರೀ ಆದಿ ಕಾವೇರಿ ನಿನ್ನ ಮಹಿಮೆಯ ಕಣ್ಣಾರೆ ಕಾಣಲೆಂದು ಸೇರಿ ಬಂದಿಹೆವು ನಾವೆಲ್ಲರೂ ನಾಡ ಜನಗಳು ಸೇರಿ  ಮುನಿ ...

ಜ್ಯೋತಿ ಆಳಲಿ ಜಗವ

ಜ್ಯೋತಿ ಆಳಲಿ ಜಗವ ~~~~~~~~~~~~ ಬೆಳಗಲಿ‌ ಜ್ಯೋತಿಯು ದೀಪ ಆಳಿ ಕಳೆಯಲಿ ಕತ್ತಲು ಕೋಪ‌ವ ಅಳಿ ಸರ್ವ ಜನರ ಶಾಂತಿ ತೋಟದಲಿ ಪಾಲು ಬಾಳು ಸಮಾನವಾಗಿರಲಿ. ದೀಪವೆಂಬ ಬೆಳಕಿನ ಹಬ್ಬ ಬೆಳಗುತಾ ಬಾಳ ಬೆಳಕುಗಳ ಏಳಿಗೆಗೆ ಹರಿಸ...

ಏನೀ ಅಚ್ಚರೀ

ಏನೀ ಅಚ್ಚರೀ ~~~~~~~~ ಅಡವಿಯ ಅರಿಯದೇ ಅದರೊಳು ನುಸುಳಿರೆ ಆಧ್ಯ ಸ್ವಾಗತ ಗೈದವರು ಜಿಗಣೆರಾಯರು ನೆತ್ತರ ಹೀರುತಲಿದ್ದರೂ ಅರಿವಿಲ್ಲ ಇನಿತಾದರೂ ಕಾಲಿಗಂಟಿ ಕೆಸರಾದಾಗ ಬೊಬ್ಬಿರಿಯುವಂತಾಯ್ತು ಕೋಪದಿ ಕಿತ್ತ...

ಧರೆಯ ಅಚ್ಚರಿ

ಧರೆಯ ಅಚ್ಚರಿ ~~~~~~~~ ಧರೆಯ ದಟ್ಟ ಕಾನನದೊಳು ಪುಟ್ಟ ಝರಿಯಂತೆ ಜನಿಸಿ ಮೊದಲ್ಗೊಂಡು ಕಿರುಬೆರಳ ತೆರದಿ ಹರಿದು ಅಡೆತಡೆದ ಕಲ್ಲುಮುಳ್ಳುಗಳ ಮುಳುಗಿಸಿ ಹರಿದ ಜಲರಾಶಿಯಿದು ಬಲ್ಲಿರೇ ಒಳಗಿಹುದಾ? ಅಸೀಮ ರೂಪಿ ಅ...

ನಿರಂತರ

ನಿತ್ಯ ನಿರಂತರ ~~~~~~~~ ನಿತ್ಯ ನಿರಂತರ ನಮ್ಮಯ ಪಯಣ ಹುಟ್ಟಿದ ಕ್ಷಣ ಅಳುವಿನ ಗಾಯನ ಮುಂದೆ ಅಳು ನಗುವ ಸಮ್ಮಿಲನ ಪ್ರೀತಿಯ ಪ್ರೇಮದ ಸಂಮೋಹನ ಮರಣದ ಬಳಿಕ ನಿರಾಳ ಮೌನ ಶೈಶವದಲ್ಲಿ ಅಮ್ಮನೊಂದಿಗೆ ನಡೆದಾಡುವಾಗ ಬಾ...

ಉಣಲೂ ಇಲ್ಲ ಉಡಲೂ ಇಲ್ಲ

ಉಣಲೂ ಇಲ್ಲ  ಉಡಲೂ ಇಲ್ಲ ~~~~~~~~~~~~~~~~ ಉಣಲೂ ಇಲ್ಲ  ಉಡಲೂ ಇಲ್ಲ ಹಸಿವ ಮರೆಯಲಾಗಲೂ ಇಲ್ಲ ಅದರಿಂದ ನಾನು ಬಡವಾಗಿಹೆನಲ್ಲ ನಿಜಕ್ಕೂ ನಾನು ಬಡವ ಅನಾಥ ಯಾರೋ ತಾಯಿ ಕೊಟ್ಟಳೊಂದು ತಟ್ಟೆ ಇಟ್ಟಳು ಅನ್ನವ ತುಂಬುವಂತೆ ಹೊ...

ಸಿಹಿ ಗಲ್ಲ ಶಾಯಿರಿಗಳು

ಸಿಹಿ ಗಲ್ಲ ೧ ~~~~~~~ ಸಿಗದಲ್ಲ ಆ ಗಲ್ಲ ಸಿಹಿ ಸಿಹಿ ಬೆಲ್ಲ  ನಿನ್ನ ಗಲ್ಲದ ಸೆಳೆತಕ್ಕೆ ಸೋತಿಹೆ ನಲ್ಲ ಸಿಗದ ಗಲ್ಲ ನನದಲ್ಲ ಬಾ ಬಾರೋ ನಲ್ಲ ಇದು ನಿನ್ನದೇ ಗಲ್ಲ ಮೆಚ್ಚಿನ ಬೆಲ್ಲ ೨ ~~~~~~~~ ನಿನ್ನದೇ ಗಲ್ಲ ಸೆಳೆಯಿತು ...