ಗಝಲ್ ೩
ಗಝಲ್ ೩
~~~~~~~
ಅಂದ ಚೆಂದ ತುಂಬಿದ ಆನಂದ ಚಂದಿರ ನಮ್ಮ ನುಡಿ ಕನ್ನಡ
ಅರಳು ಹುರಿದಂತೆ ಮನವು ಮಿಡಿವಂತೆ ನುಡಿಯೆ ನಮ್ಮ ನುಡಿ ಕನ್ನಡ
ಮಾಮರದ ಕೋಗಿಲೆ ಧನಿಯಂತೆ ಮನಕೆ ತಂಪನ್ನೀವ ನುಡಿ ಕನ್ನಡ
ಮಾತೆಯ ಜೋಗುಳಕೆ ಮೈಮರೆವ ಹಸುಗೂಸ
ಕನಸು ಸವಿ ನಮ್ಮ ನುಡಿ ಕನ್ನಡ
ಜೀವನದಿ ಹರಿ ಹರಿದು ಸಾಗರವ ಬೆರೆತಂತೆ ನುಡಿ ಕನ್ನಡ
ಜೀವನದಿ ಹರಿದಲ್ಲಿ ಇಳೆಯ ಬೆಳೆ ಬೆಳೆದಂತೆ ನಮ್ಮ ನುಡಿ ಕನ್ನಡ
ಕರುನಾಡ ನುಡಿಯಿದು ಸಿರಿನುಡಿಯ ಇಂಪಿದು ನುಡಿ ಕನ್ನಡ
ಕನ್ನಡದ ಕಂಪು ನಮ್ಮಯ ಕರ್ಣಕ್ಕೆ ಅಪ್ಪಳಿಸೆ ತಂಪು ತಂಪು ನಮ್ಮ ನುಡಿ ಕನ್ನಡ
ಒಲವಿನ ನುಡಿಯದು ಹೆಜ್ಜೇನು ಸವಿದಂತೆ ನುಡಿ ಕನ್ನಡ
ಒಲವಿನ ರಸಸ್ವಾದ ಪ್ರೀತಿಯ ಕಡಲಂತೆ ಹೊನ್ನ ನುಡಿಯು ನಮ್ಮ ನುಡಿ ಕನ್ನಡ
ಜೀವನ ಜೀವದ ಒಡನಾಡಿ ಹರಿದಿಹುದು ಹರಿದಾಡಿ ನುಡಿ ಕನ್ನಡ
ನಮ್ಮೆದಯು ಮಿಡಿಯುವ ಪ್ರತಿ ಮಿಡಿತದಲಿ ಸಮ ಚಿತ್ತವಿದು ನಮ್ಮ ನುಡಿ ಕನ್ನಡ
"ಸಿಡಿಲು"ನ ಒಡಲ ಕಣಕಣವೂ ತುಂಬಿಹುದು ನೋಡ ನುಡಿ ಕನ್ನಡ
ಎನ್ನೊಡಲ ನರನಾಡಿಯ ಹನಿಹನಿ ನೆತ್ತರಲಿ ಹರಿದಿಹುದು ನೋಡ ನಮ್ಮ ನುಡಿ ಕನ್ನಡ
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೩೧/೧೦/೨೦೧೭
Comments
Post a Comment