ಸಣ್ಣ ಕಥೆ

ಸಣ್ಣ ಕಥೆ
~~~~~

ಗೋಪಿ ಹದಿಹರೆಯದ ಯುವಕನಾದರೂ ಬಡತನದಲ್ಲಿ ಬೆಳೆದು ತಮ್ಮ ತಂಗಿಯರ ವಿದ್ಯೆಗೆ ಮೂರು ಹೊತ್ತು ಕೂಳಿಗೆ ಅಮ್ಮನಿಗೆ ಹೊರೆಯಾಗಬಾರದೆಂದು ವಿದ್ಯೆಯನ್ನು ಮೊಟಕುಗೊಳಿಸಿ  ಹೊರ ಊರಿನ ಹಾದಿ ಹಿಡಿದಿದ್ದ. ಅಂದು ಆತ ಸ್ನೇಹಿತರ ಜೊತೆ ಬಸ್ಸಿಳಿದು ನಡೆಯುತ್ತಿದ್ದ. ದೂರದ ಊರಿನಲ್ಲಿ ತನ್ನ ಊರಿನ ಹೆಸರು ಕೇಳಿ ಪುಳಕಿತನಾಗಿ ತಿರುಗಿ ನೋಡಿದ ಅದಾರೋ ಪರಿಚಯ ರಹಿತ ಮಹಿಳೆ ಬೇರೆ ಕಡೆಗೆ ತೆರಳುವ ಬಸ್ಸಿನ ಬಳಿ ಅವರ ಊರಿನ ಬಸ್ಸಿನ ಬಗ್ಗೆ ವಿಚಾರ ಮಾಡುತಿದ್ದರು. ವಯಸ್ಸಿನಲ್ಲಿ ಆಕೆ ಅವನಿಗೂ ಬಹಳ ಹಿರಿಯಳು. ಅವಳನ್ನು ಕಂಡಾಗ ತನ್ನ ಅಕ್ಕನೇ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನಿಸಿತು
ಆಕೆ ಬಸ್ಸಿನ ನಿರ್ವಾಹಕರ ಮಾತಿನಿಂದ ನಿರಾಸೆ ಭಾವ ಮೂಡಿಸುತಾ ಪೆಚ್ಚಾಗಿ ನಿಂತಿದ್ದಳು. ಅಮಾಯಕ ಯುವಕ ಗೋಪಿ ತನ್ನೂರಿನ ಮಹಿಳೆ ಸಂಕಷ್ಟದಲ್ಲಿದ್ದಾಳೆ. ಸಹಾಯ ಮಾಡುವ ಅವಕಾಶ ಸಿಕ್ಕಿತು.

ಹೇಗೋ ನನಗೆ ಊರಿಗೆ ಹೋಗುವ ಬಸ್ ನಿಲ್ದಾಣ ಗೊತ್ತಿದೆ. ಸಮಯದ ಅಭಾವವೂ ಇಲ್ಲ. ಆಕೆಯನ್ನು ಬಸ್ಸಿಗೆ ಹತ್ತಿಸಿ ನಂತರ ನಮ್ಮ ಕೆಲಸ ಮಾಡುವ ಎಂದು ಆಕೆಯ ಹತ್ತಿರ ಹೋಗಿ ಬನ್ನಿ ಅಮ್ಮ ನಿಮ್ಮ ಊರಿನ ಬಸ್ ಹತ್ತಿಸಿ ಬರುವೆ ಎಂದ ಅಷ್ಟೇ. ಆಕೆಗೆ ಏನನಿಸಿತೋ ಅಯ್ಯೋ ನಿನ್ನ ನನ್ನನ್ನು ಬಸ್ಸಿಗೆ ಹತ್ತಿಸುತ್ತೀಯಾ ನೀನಾರೋ ಎಂದು ಕೈ ಬೀಸಿ ಕೆನ್ನೆಗೆ ಬಾರಿಸಿದಳು. ಏನು ಎತ್ತ ಎಂದು ವಿಚಾರಿಸದೇ ಸುತ್ತಮುತ್ತಲೂ ಇದ್ದ ಕೆಲವರು ಗೋಪಿಯನ್ನು ಗೊತ್ತುಗುರಿಯಿಲ್ಲದಂತೆ ಹಿಗ್ಗಾಮುಗ್ಗ ಬಾರಿಸಿದರು. ಎಲ್ಲವನ್ನೂ ವೀಕ್ಷಿಸುತ್ತಿದ್ದ ಟಾಂಗಾ ಚಾಲಕ ಉಪಾಯವಾಗಿ ಗೋಪಿಯನ್ನು ಅವರ ಕೈಯಿಂದ ತಪ್ಪಿಸಿ ರ ಕರೆದೊಯ್ದು ಬಿಟ್ಟ.

ಹಳ್ಳಿಯ ಅಮಾಯಕ ನಗರದಲ್ಲಿ ಅನ್ಯಾಯದ ಒದೆ ತಿಂದ ಕಥೆ ಇದು.

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು