ಸಮವೇ ಸುಮ
ಸಮವೇ ಸುಮ
~~~~~~~~~
ಸುಮದ ಸುಕೋಮಲ ಭಾವ
ಮೃದು ಮಧು ಮಧುರ ಸಾರ
ದೇವ ದೇವಿ ಮುಡಿಯ ಹಾರ
ಅರಿತು ನೋಡೆ ಜೀವನ ಸಾರ
ಅರಿಯದೇ ಮುಳ್ಳಿನ ಸಂಗ
ಬಿಡಲಾರದ ದಾರದ ಸಂಗ
ಸುಮಾಗಮ ಘಮದ ಅಂಗ
ಅದಕ್ಕಿಲ್ಲ ಯಾವುದೇ ಭಂಗ
ಎಲ್ಲಿಟ್ಟರೂ ಅವಿನಾವ ಭಾವ
ಏಕದಿನದಿ ಬಾಡಿತದು ಜೀವ
ಸಾರ್ಥಕ ಬಾಳಿನ ಅನುಭಾವ
ನಿಷ್ಕಲ್ಮಸ ಪ್ರೀತಿಯ ಅನುಭವ
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೨೮/೧೦/೨೦೧೭
Comments
Post a Comment