ನ್ಯಾನೋ ಕಥೆಗಳು ೨

ನ್ಯಾನೋ ಕಥೆಗಳು
@@@@@@@@

ತಾರಮ್ಮಯ್ಯ
~~~~~~~
ಗೆಳೆಯ ಇನಿಯ ನೀನೆ ಸರ್ವಸ್ವ ನೀನೇ ಮಿನುಗುವ ನಕ್ಷತ್ರ ಎಂದಳು ತನ್ನ ಅಗತ್ಯ ಪೂರೈಕೆಗಾಗಿ. ಅವಶ್ಯಕತೆ ಮುಗಿದಾಗ  ತಾರಮ್ಮಯ್ಯ ತೋರಿಸಿ ನಡೆದಳು. ಮುಂದಿನ ಬೇಟೆಗಾಗಿ.

ಚಿತೆಯ ಕೆಂಡ
~~~~~~~~
ಹೊಳೆವ ಬೆಳಕ ಕಂಡು ಜಾರಿ ಬಿದ್ದ ನಕ್ಷತ್ರ ಇರಬಹುದೆಂದು ಬಳಿ ಸಾರಿದಾಗಿ ತಿಳಿಯಿತು. ಇದೊಂದು ಚಿತೆಯು ಆರಿ ಅಳಿದುಳಿದ ಕೆಂಡದ ಬೆಳಕೆಂದು.

ಮಿಣುಕು ಹುಳು
~~~~~~~~~
ಹೊಳೆಯುವ ನಕ್ಷತ್ರಗಳ ಬೇಟೆಗೆ ಹೊರಟವನು ಎಂದಿಗೂ ಮಿಣುಕು ಹುಳಗಳ ಸಹಾಯ ಬೇಡಲಾರ. ಯಾಕೆಂದರೆ ಮಿಣುಕು ಹುಳುಗಳ ಬೆಳಕನು ನಂಬಿ ಹೆಜ್ಜೆ ಇಡಲಾರದೆಂದು ಅವ ಮೊದಲೇ ಬಲ್ಲ.

ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೨೧/೧೦/೨೦೧೭

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು