ಭಾವ × ಬತ್ತಿ
ಭಾವ × ಬತ್ತಿ
~~~~~~~
ಕವಿ ಭಾವ ಜೀವಿ
ಭಾವ ಕವಿ ಜೀವ
ಕವಿ ಬೇಡಿಕೆ ಕಿವಿ
ಕಿವಿ ಮೆಚ್ಚುಗೆ ಕವಿ
ಕಿವಿ ಓದಿ ರಸಸ್ವಾದ
ಕವಿ ನುಡಿಯೆ ವೇದ
ನಿಜ ಕವಿಗಿಲ್ಲ ಭೇದ
ನಿಜ ಕಿವಿಗೆ ಮೋದ
ಸ್ವಾದ ಅರಿಯುವ ಕಿವಿ
ಸವಿಯುತ ಕವಿತೆ ಓದಿ
ತಾನಾಗ ಬಯಸಿ ಕವಿ
ಭಾವ ಚಿಮ್ಮಿದರೆ ಕವಿ
ಬಿರಿಯದಿರೆ ಸುಮ್ಮನಿರಿ
ಅಪಹರಿಸಿ ಭಾವದ ಸಿರಿ
ಕೃತಿಚೌರ್ಯ ಅಲ್ಲ ಶೌರ್ಯ
ಕವಿಮನಕೆ ಎಸಗಿದ ಕೌರ್ಯ
ಸರಿಯಲ್ಲ ತಮ್ಮ ಈ ಕಾರ್ಯ.
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೨೮/೧೦/ ೨೦೧೭
Comments
Post a Comment