ಕರುನಾಡು
ಕರುನಾಡು
~~~~~~
ಕರುನಾಡು ಸಕಲ ಐಸಿರಿಯ ಬೀಡು
ಕರುಣೆಯ ಹೆಸರು ಪಡೆದಿಹ ನಾಡು
ಹಚ್ಚಿದರೆ ಹಸ್ತ ಹೊನ್ನಾಗುವ ನಾಡು
ತಂಗಾಳಿ ಅಲೆಯ ಶ್ರೀ ಗಂಧದ ಬೀಡು
ಸಕಲ ಕಲೆಯ ಕಲಿತು ಸಂಗೀತ ಹಾಡು
ಕಂದಾ ಎಂದು ಕರೆವ ಅಮ್ಮನ ನುಡಿ
ಕಂದಗೆ ಅಮ್ಮನ ಮಡಿಲೆ ದೇವರ ಗುಡಿ
ಎನಿತು ಇನಿತಾಗಿಹುದು ಕನ್ನಡ ನುಡಿ
ಸಾವು ಬಂದರೂ ಸತ್ಯವನೆ ನೀ ನುಡಿ
ಸುಳ್ಳು ಪೊಳ್ಳುಗಳೆಲ್ಲವನು ದೂರ ಇಡಿ
ಕವಿ ಕೋಗಿಲೆಗಳ ಹಾಡು ನೀಡಿದ ಪಾಡು
ಹರಿವ ತೊರೆಯ ಝುಳು ಝುಳು ಹಾಡು
ಶರದಿಯ ಸಮವುಂಟೆ ಸರಿಯಲಿ ಜಾಡು
ಸಕಲವ ಸವಿದು ಸಿಹಿ ಕನಸಲಿ ಈಜಾಡು
ಮಧುರಸ ಸವಿದ ಮಗುವಂತೆ ನೋಡು
ಜೋಕಾಲಿ ಜೀಕುತಾ ಜೋಗುಳವ ಕೇಳಿ
ಮಗು ಮೈಮರೆತು ನಿಲ್ಲಿಸಿ ತನ್ನೆಲ್ಲಾ ಕೇಲಿ
ಕನ್ನಡದ ರಾಗ ರಂಜನೆಗೆ ತಲೆದೂಗಿ ತಾಲಿ
ಕೈಯಲ್ಲಿ ಹಿಡಿದು ಹೊಡೆಯದಂತೆ ಜೋಲಿ
ಸ್ಥಬ್ದವಾಯಿತು ಚೀರಾಡಿದ ಮನದ ಖೋಲಿ
ಕರುನಾಡ ಸುತ್ತಲೂ ನಡೆದಿದೆ ಈ ಪಾಡು
ಕನ್ನಡವೇ ಉಸಿರೆಂದು ಧ್ವನಿಯೆತ್ತಿ ಹಾಡು
ಕನ್ನಡದ ರಕ್ಷಣೆಗೆಂದೆ ಸೇರಿಹೆವು ನೋಡು
ದಿಕ್ಕು ದಿಕ್ಕಿಗೆ ಹರಿಯಲಿ ಕನ್ನಡದ ಜಾಡು
ಉಸಿರಾಗಲಿ ಹೆಸರಾಗಲಿ ಕನ್ನಡದ ಹಾಡು
ಸಿಡಿಲು
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೨೦/೧೦/೨೦೧೭
Comments
Post a Comment