ಉಣಲೂ ಇಲ್ಲ ಉಡಲೂ ಇಲ್ಲ
ಉಣಲೂ ಇಲ್ಲ ಉಡಲೂ ಇಲ್ಲ
~~~~~~~~~~~~~~~~
ಉಣಲೂ ಇಲ್ಲ ಉಡಲೂ ಇಲ್ಲ
ಹಸಿವ ಮರೆಯಲಾಗಲೂ ಇಲ್ಲ
ಅದರಿಂದ ನಾನು ಬಡವಾಗಿಹೆನಲ್ಲ
ನಿಜಕ್ಕೂ ನಾನು ಬಡವ ಅನಾಥ
ಯಾರೋ ತಾಯಿ ಕೊಟ್ಟಳೊಂದು ತಟ್ಟೆ
ಇಟ್ಟಳು ಅನ್ನವ ತುಂಬುವಂತೆ ಹೊಟ್ಟೆ
ಅಂದಿಗೆ ಕೊನೆ ತುಂಬಿದ ತಟ್ಟೆ
ಮತ್ತೆ ಹಸಿವಿನಿಂದ ನಾ ಕಂಗೆಟ್ಟೆ
ಉಡಲು ತೊಡಲು ಇಲ್ಲ ಚಿನ್ನ
ಉಳಿದಿರುವುದೊಂದೆ ಹರಿದ ಚಣ್ಣ
ಹಸಿವಾಗುವುದು ಚಣಚಣ
ಇದು ಇದ್ದದ್ದೇ ಅನುದಿನ
ಒಮ್ಮೆ ನೋಡಿದೆ ಒಂದು ಬೋರ್ಡು
ಓದಲರಿಯದೆ ಹೇಳಿದರು ಬುದ್ಧಿವಂತರು
ಇಲ್ಲಿ ಚಿಕಿತ್ಸೆಗಳೆಲ್ಲ ನಿಜಕ್ಕೂ ಉಚಿತ
ಕಾಯಿಲೆ ವಾಸಿಯಾಗುವುದು ಖಚಿತ
ಹೆದರಿ ಮುದರಿ ಒಳಗೆ ಹೋದೆ
ನನ್ನೆಯ ಕಾಯಿಲೆಯ ಅವರಿಗೆ ಹೇಳಿದೆ
ಅದಕ್ಕೆ ಅವರೆಂದರು , ಕಣ್ಣೀರ ಹರಿಸಿದರು
ಬಿಕ್ಕುತ್ತ ಬಿಕ್ಕುತ್ತಾ ಉಸುರಿದರು
ಹಸಿವೆಂಬುದು ನಿತ್ಯ ಮೂರು ಹೊತ್ತಿನ ಯಾತ್ರೆ
ಪರಿಶೋಧಿಸಿಲ್ಲ ಇದಕ್ಕಿನ್ನು ಮದ್ದು ಮಾತ್ರೆ
ನಿಲ್ಲಿಸಿದಾಗ ಹಸಿವಿನ ಯಾತ್ರೆ
ಹೊರಡುವುದು ನಮ್ಮಾತ್ಮ ಪರಲೋಕ ಯಾತ್ರೆ
ಇದು ಎನ್ನಯ ಬಾಳು ದಿನನಿತ್ಯದ ಗೋಳು.
Comments
Post a Comment