ಸಿಹಿ ಗಲ್ಲ ಶಾಯಿರಿಗಳು
ಸಿಹಿ ಗಲ್ಲ ೧
~~~~~~~
ಸಿಗದಲ್ಲ ಆ ಗಲ್ಲ
ಸಿಹಿ ಸಿಹಿ ಬೆಲ್ಲ
ನಿನ್ನ ಗಲ್ಲದ ಸೆಳೆತಕ್ಕೆ
ಸೋತಿಹೆ ನಲ್ಲ
ಸಿಗದ ಗಲ್ಲ ನನದಲ್ಲ
ಬಾ ಬಾರೋ ನಲ್ಲ
ಇದು ನಿನ್ನದೇ ಗಲ್ಲ
ಮೆಚ್ಚಿನ ಬೆಲ್ಲ ೨
~~~~~~~~
ನಿನ್ನದೇ ಗಲ್ಲ
ಸೆಳೆಯಿತು ನಲ್ಲ
ಬಳಿಗೆ ಬಂದಾಗ
ಚುಚ್ಚುವುದಲ್ಲ
ಬಳಿಗೆ ಬರುವವರು
ಯಾರಿಲ್ಲವೆಂದೇನು
ಕೊರಗದಿರು ನಲ್ಲ
ನಾನಿಲ್ಲವೆ ನಿನ್ನ
ಮೆಚ್ಚಿನ ಬೆಲ್ಲ
ಇದೋ ನನ್ನ ಗಲ್ಲ
ಗೆಳತಿ ೩
~~~~
ಗೆಳತಿ ನನ್ಯಾಕೆ ಮರೆತಿ
ಹತ್ತಿರವಿದ್ದರೆ ಕಾಡುತಿ
ದೂರವಿದ್ದರೆ ಬೇಡುತಿ
ನಿಂದಿಸಲೆಂದೇ ಸರತಿ
ಹೀಗೆಯೇ ಕೊರಗುತಿ
ಕೆಲವೊಮ್ಮೆ ಮರುಗುತಿ
ನಿನ್ನದಾಯ್ತು ಅತಿ
ಮುಂದಿನ ಸರತಿ
ನನ್ನದೇ ಐತಿ
*ಸಿಡಿಲು*
*ವೈಲೇಶ ಪಿ ಯೆಸ್ ಕೊಡಗು*
ಕರಾರಸಾಸಂಸ್ಥೆ ಮಡಿಕೇರಿ *ಚಾಲಕ*
೧೨/೧೦/೨೦೧೭
Comments
Post a Comment