ಪ್ರಕೃತಿ ದೌರ್ಜನ್ಯ
ಪ್ರಕೃತಿ ದೌರ್ಜನ್ಯ
₩₩₩₩₩₩₩₩
ಗಜಪಡೆಯು ಬಂದಿತ್ತಾ
ತೋಟವನೇ ನುಂಗಿತ್ತಾ
ಎಂದರೆ ಗಜಪಡೆಯ ತಪ್ಪೇನು?
ಗಜನಡೆವ ಹಾದಿಯಲಿ
ಬೇಲಿಯನು ನೆಟ್ಟವರು
ತೋಟವನು ಗೈದವರು ನಾವೇ ಅಲ್ಲವೇನು?
ಚಿರತೆಯು ಬಂದಿತ್ತಾ
ಕರುವನ್ನೇ ತಿಂದಿತ್ತಾ
ಎಂದರೆ ಚಿರತೆಯ ತಪ್ಪೇನು?
ಚಿರತೆಯ ಆಹಾರ ಚಿಗರೆಯನು
ಕೊಂದು ತಿಂದವರು ನಾವಲ್ಲವೇನು?
ಹುಲಿರಾಯ ಬಂದಾನ
ಹಾಲೀವ ಹಸುವ ಒಯ್ದಾನ
ಅಂದರೆ ಹುಲಿರಾಯನ ತಪ್ಪೇನ?
ಹುಲಿರಾಯನ ಉದರಕ್ಕೆ ಹಿಡಿಮಾಂಸ
ಆಗಿದ್ದ ಮೊಲರಾಯ ನರಿರಾಯರ
ಕಾಯವ ಕಾಯಿಸಿ ತಿಂದವರು ನಾವೇ ಅಲ್ಲವೇನು?
ಕರಡಿಯು ಬಂದಿತ್ತಾ
ಮಡದಿಯ ಕಾಡಿತ್ತಾ
ಕರಡಿಯ ಕಾಟಕ್ಕೆ
ಮತಿಗೆಟ್ಟ ಮಡದಿಯು
ಕಾಡುಪಾಲಾದರೆ ಕರಡಿಯ ತಪ್ಪೇನು ?
ಕಾಡು ಮೇಡನು ತಿರುಗಿ
ಕರಡಿಯು ಕುಡಿಯುವ
ಸಿಹಿ ಜೇನು ನೊರೆ ಜೇನು
ಕಾಡುಹಣ್ಣುಗಳೆಲ್ಲವನು
ತಿಂದು ತೇಗಿದವರು ನಾವೇ ಅಲ್ಲವೇನು?
ಕಾನನದ ಜೀವ ಸಂಕುಲಕೆ
ಕುತ್ತು ತಂದಿತ್ತು ವನಜೀವಿಗಳ
ನಾಡಿಗೆ ಅಹ್ವಾನಿಸಿ ನಮ್ಮ ಕುತ್ತಿಗೆಗೆ
ಉರುಳು ತಂದು ಕೊಂಡವರು ನಾವೇ ಅಲ್ಲವೇನು?
ನಾಡಿನ ತುಂಬೆಲ್ಲಾ
ಕಾಂಕ್ರೀಟು ಕಾಡು ಕಟ್ಟಿದ
ನರಮಾನವನೇ ಕಾಡುಪ್ರಾಣಿಗಳ
ನಿಂದಿಸಿ ಫಲವಿರದು
ತಪ್ಪೆಲ್ಲ ನಮ್ಮವರದು!
ಪ್ರಕೃತಿಯು ಸಕಲ ಜೀವಿಗಳದು
ಅರಿಯಿರಿ ಅಣ್ಣ ಅಕ್ಕಗಳಿರಾ
ನಿಲ್ಲಿಸಿ ಪ್ರಕೃತಿ ದೌರ್ಜನ್ಯ ಪರಂತು
ಕಾದಿದೆ ಪ್ರಕೃತಿ ವಿಕೋಪವೆನ್ನುವುದು
ಪ್ರಕೃತಿಯ ಮುಂದೆ ನಡೆಯದು ಪ್ರತಾಪ
ಮುಂದಿನ ನಮ್ಮ ಪೀಳಿಗೆಗೆ ಕಾದಿದೆ ಪರಿತಾಪ!
ವೈಲೇಶ ಪಿ ಯೆಸ್
ಕೆ.ಬೋಯಿಕೇರಿ
ವಿರಾಜಪೇಟೆ
23/10/2016
Comments
Post a Comment