ಜ್ಯೋತಿ ಆಳಲಿ ಜಗವ

ಜ್ಯೋತಿ ಆಳಲಿ ಜಗವ
~~~~~~~~~~~~

ಬೆಳಗಲಿ‌ ಜ್ಯೋತಿಯು ದೀಪ ಆಳಿ
ಕಳೆಯಲಿ ಕತ್ತಲು ಕೋಪ‌ವ ಅಳಿ
ಸರ್ವ ಜನರ ಶಾಂತಿ ತೋಟದಲಿ
ಪಾಲು ಬಾಳು ಸಮಾನವಾಗಿರಲಿ.

ದೀಪವೆಂಬ ಬೆಳಕಿನ ಹಬ್ಬ ಬೆಳಗುತಾ
ಬಾಳ ಬೆಳಕುಗಳ ಏಳಿಗೆಗೆ ಹರಿಸುತಾ
ನಿತ್ಯ ಸತ್ಯವೆಂಬ ಎಣ್ಣೆ ಬತ್ತಿ ಹೊಸೆಯುತಾ
ಜಗದ ಜನರ ಬಾಳು ಬೆಳಗಿರೆ ಸಾರ್ಥಕ ತಾ

ಕೋಪ ತಾಪದ ಪಟಾಕಿಗಳ ದೂರವಿಟ್ಟು
ಕತ್ತಲೆ ಎಂಬಂತ ಅಹಂಕಾರ ಆಚಗೆ ಅಟ್ಟು
ಎಲ್ಲರೂ ನಮ್ಮವರೇ ಎಂಬುದು ಮನವಿಟ್ಟು
ಬಾಳುವುದೇ ನರ ಮಾನವನ ಒಳಗುಟ್ಟು

ಜನಿಸುವ ಮುನ್ನ ನಮ್ಮ ಜಗತ್ತು ಕತ್ತಲೇ
ಜಗದ ಸವಿ ಸವಿಯುವ ಮುನ್ನ ಬೆತ್ತಲೆ
ವಿಧಿಯು ನಾಟಕ ತೆರೆ ಸರಿಸಿದ ಮೇಲೆ
ಯಾರರಿತಿಹರು ಯಾವ ಕಡೆ ನಮ್ಮ ತಲೆ

ನಿಜವ ನುಡಿದೊಡೆ ಸರಿಯಲ್ಲ ಎನ್ನುವಿರಿ
ಅನ್ಯಾಯದ ಕಡೆಗೆ ಮುಖವ ಮಾಡಿರುವಿರಿ
ಎನಿಸುತಿದೆ ಅದುವೇ ಜಗದ ಇಂದಿನ ಐಸಿರಿ
ನಮಗರಿಯದೇ ಏರುತಿದೆ ಪಾಪಗಳ ಹಿರಿಗಿರಿ
ದೀಪದ ರೂಪದಿ ಜಗವ ನೀ ಬೆಳಗೋ ಶ್ರೀ ಹರಿ.

#ಸಿಡಿಲು
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೧೮/೧೦/೨೦೧೭

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು