ನಿರಂತರ
ನಿತ್ಯ ನಿರಂತರ
~~~~~~~~
ನಿತ್ಯ ನಿರಂತರ ನಮ್ಮಯ ಪಯಣ
ಹುಟ್ಟಿದ ಕ್ಷಣ ಅಳುವಿನ ಗಾಯನ
ಮುಂದೆ ಅಳು ನಗುವ ಸಮ್ಮಿಲನ
ಪ್ರೀತಿಯ ಪ್ರೇಮದ ಸಂಮೋಹನ
ಮರಣದ ಬಳಿಕ ನಿರಾಳ ಮೌನ
ಶೈಶವದಲ್ಲಿ ಅಮ್ಮನೊಂದಿಗೆ
ನಡೆದಾಡುವಾಗ ಬಾಲವಾಡಿಗೆ
ಗೆಳೆಯರೊಂದಿಗೆ ಕಾನ್ವೆಂಟಿಗೆ
ಭಯದೊಂದಿಗೆ ಪ್ರೌಢಶಾಲೆಗೆ
ಕಾರಣವನ್ನರಿತು ಕಾಲೇಜಿಗೆ
ಪ್ರೇಮದ ಮೋಹಕೆ ಸೋತು
ಪ್ರೇಮಿಯ ಮನದಲಿ ಹೂತು
ಮದುವೆ ನೆಪವದು ಮುಗಿದು
ವಂಶದ ಕುಡಿಗಳವು ಬೆಳೆದು
ದಡವ ಸೇರಿಸೆ ತಾ ದುಡಿದು
ಪುಟ್ಟ ಗೂಡಿನೊಳಗೇ ಕೆದಕು
ಶಾಂತಿಯುತ ಜೀವನ ಹುಡುಕು
ರೆಕ್ಕೆ ಬಲಿತ ಹಕ್ಕಿ ಹಾರಿ ಬದುಕು
ಅರಿಯದೇ ಮೀರಿದೆ ದುಡುಕು
ಮೂಡಿ ಬರಲಿ ನಿತ್ಯವೂ ಬೆಳಕು
ಯಾರಿಗೆ ಬಗೆದಿದ್ದೀವೋ ಕೆಡುಕು
ನಮಗೆ ಬಗೆದವರೆಷ್ಟೋ ಕೊಳಕು
ಜೀವ ಇರುವವರೆಗೂ ಮೆಲುಕು
ಪುಳಕಗೊಂಡರೂ ಅಲ್ಪ ಚಳುಕು
ದೈವ ಚರಣಕೆ ಇರಲಿ ಎಲ್ಲ ಅಳುಕು
ಇದುವೆ ಬದುಕಿನಾ ಶ್ರೇಷ ಪಯಣ
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೧೪/೧೦/೨೦೧೭
Comments
Post a Comment