ನಡೆದವರು
ನಡೆದವರು
~~~~~~
ಕರೆಯದೇ ಬಂದರು
ಮನದಲ್ಲಿ ನಿಂದರು
ಮನದಂತೆ ಅಂದರು
ಅವರಂತೆ ಬೆಂದರೂ
ನುಡಿಯದೇ ನಡೆದರು
ಅವರಾಗೇ ಕರೆದರು
ಅವರಿಚ್ಚೆ ಹೇರಿದರು
ಮನವನ್ನೇ ತೊಳೆದರು
ಕೊಳೆಯ ತುಂಬಿದರು
ಬಳಿಯಿಂದ ತಳ್ಳಿದರು
ಯಾರೇನೇ ಅಂದರೂ
ಮನವನ್ನು ಅರಿಯರು
ಮಾತಿಗೆ ಸರಿ ನಡೆಯರು
ನಮಗೆ ನಾವೇ ಒಡೆಯರು
ಇದನ್ನೆಂದೂ ಮರೆಯದಿರ
ಸಿಡಿಲು
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೨೫/೧೦/೨೦೧೭
Comments
Post a Comment