ಧರೆಯ ಅಚ್ಚರಿ

ಧರೆಯ ಅಚ್ಚರಿ
~~~~~~~~
ಧರೆಯ ದಟ್ಟ ಕಾನನದೊಳು ಪುಟ್ಟ
ಝರಿಯಂತೆ ಜನಿಸಿ ಮೊದಲ್ಗೊಂಡು
ಕಿರುಬೆರಳ ತೆರದಿ ಹರಿದು ಅಡೆತಡೆದ
ಕಲ್ಲುಮುಳ್ಳುಗಳ ಮುಳುಗಿಸಿ ಹರಿದ
ಜಲರಾಶಿಯಿದು ಬಲ್ಲಿರೇ ಒಳಗಿಹುದಾ?

ಅಸೀಮ ರೂಪಿ ಅಂಬರದೆಡೆ ದೈವದತ್ತ
ನಯನಕೆ ನಿಲುಕಿದ ದೂರಕೆ ಧರೆಯತ್ತ
ನಿರುಕಿಸಿದಾಗ ಗಿರಿ ಕಂದರ ನಮ್ಮ ಸುತ್ತ
ಬೆಣ್ಣೆಯ ಮುದ್ದೆಯಂತೆಯೇ ಚಲಿಸುತ್ತಾ
ಇದೆಯೋ ಎಂಬಂತ್ತಿವೆ ಇದು ದೈವಚಿತ್ತ.

ಕೆಲವಂತೂ ನಂದಿಯಂತೆ ಗಜರಾಜನಂತೆ
ಮತ್ತೆ ಕೆಲವು ಚಿದಂಬರದ ದೇಗುಲದಂತೆ
ಅಪ್ಪಟ ದೈವ ವಿಗ್ರಹವನ್ನು ಹೋಲುವಂತೆ
ರುದ್ರವೋ ರಮಣೀಯವೋ ಅರಿಯದಂತೆ
ನನ್ನೊಳು ಭಾವನೆಗಳು ಹಸುಗೂಸಿನಂತೆ.

ಒಳಗೇನಡಗಿದೆಯೋ ಬಲ್ಲವರು ಯಾರೆ
ಹೊರನೋಟಕೆ ಅಂದವಾದ ವಸುಂಧರೆ
ಇವಕೆ ನೀರು ಗೊಬ್ಬರವನು ಇಟ್ಟವರಾರೆ
ಅಂಬರವ ಚುಂಬಿಸುವ ತವಕದಲಿ ಮರ
ಮಾನವನು ಮಾತ್ರ ಬಿಡಿಸಲಾರ ಹಂದರ.

ಸಿಡಿಲು
ವೈಲೇಶ ಪಿ ಯೆಸ್
ಕರಾರಸಾಸಂಸ್ಥೆ ಚಾಲಕ ಮಡಿಕೇರಿ
೧೫/೧೦/೨೦೧೫

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು