ಶಾಯಿರಿಗಳು ಭಾಗ ೨

ಶಾಯಿರಿಗಳು
~~~~~~~
ಕಡಲು ಒಡಲು
~~~~~~~~
ರವಿಕಿರಣದ ಚುಂಬನಕೆ ಬಸಿರಾಯ್ತು ಕಡಲು.
ಹನಿಗೂಡಿ ಕರಿಮೇಘ ನೂರಾಯ್ತು ಆಗಸದೊಡಲು
ಮೇಘಗಳ ಚುಂಬನಕೆ ಸುರಿದ ಮಳೆಗೆ ಹಸಿರಾಯ್ತು ಬುವಿಯೊಡಲು
ಹರಿದ ನೀರದು ನದಿಯಾಗಿ ಮತ್ತೆ ಸೇರಿತು ಕಡಲು 

ಒಡತಿ ಬಡ್ತಿ
~~~~~~~
ಮುಂಗುರುಳ ಚುಂಬನಕೆ ರೋಮಾಂಚನಗೊಂಡಳಾ ಒಡತಿ
ವರುಷಗಳೇ ಕಳೆದರೂ ರೋಮಾಂಚನ ಅಲ್ಲದೇ ಸಿಗಲಿಲ್ಲ ಬಡ್ತಿ
ನವನಲ್ಲನ ಚುಂಬನಕೆ ಬೆವರಿ ನಾಚಿ ನೀರಾದಳಾ ಬಾಳ ಗೆಳತಿ
ಒಂಬತ್ತನೇ ತಿಂಗಳಿಗೆ ದೊರೆಯಿತವಳಿಗೆ ಅಮ್ಮನೆಬ ಬಡ್ತಿ

ತುಟಿಗಳು
~~~~~~
ತುಟಿಯ ಚುಂಬನಕೆ ಒಪ್ಪದು ಅವ್ವ ಅಕ್ಕ.
ತುಟಿಯದು ಚುಂಬಿಪುದು ಅಮ್ಮ ಅಪ್ಪ ಎನಲು ಪಕ್ಕ
ಮನದುಂಬಿ ಕರೆಯಿರೈ ಮಾತಾಪಿತರ ಅಪ್ಪ ಅಮ್ಮ

#ಸಿಡಿಲು
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೨೦/೧೦/೨೦೧೭

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು