ನಾನು ನೀನು

ನಾನು ನೀನು
~~~~~~~~
ಜಗದ ನೋಟಕೆ ನಾನು ನೀನು.
ನಿಜ ಸತಿಪತಿಗಳಾದರೇನು.
ನನಗೆ ನೀನು ನಿನಗೆ ನಾನು.
ನನಗೆ ನೀನು ನಿನಗೆ ನಾನು.
ನಾವೇ ಹಡೆದ ಮುದ್ದು ಕಂದಮ್ಮಗಳಲ್ಲವೇನು.
                                   !!ಪಲ್ಲವಿ!!
ಮದುವೆಯಾದ ಮೊದಲು ಹೊರಟೆವು
ಹನಿಮೂನು.ಎಲ್ಲಿಯ ಹನಿ ಎಲ್ಲಿಯ ಮೂನು ಎಲ್ಲವೂ ಇದ್ದದ್ದು ಎಮ್ಮ ಸವಿ ತನುವಿನೊಳಗೆ ಅಲ್ಲವೇನು.ಆದರೇನು ಹನಿ ಹನಿಯಾಗಿ ಸವಿದದ್ದು ಪರ ಊರಿನ ಪರರ ಹೊದಿಕೆಯೊಳಗೆ ಹೊದಿಕೆ ಕೆಳಗೆ
                                           !!1!!
ಹಸನಾದ ಹೊಲಗದ್ದೆಗಳ ಫಸಲು ಕಟಾವಿಗೆ ಬಂದು ನಿಂತರೂ. ಅರಿಯದಲೆ ಮರೆತಿಹೆವು ನಾವು ನಮ್ಮ ನೋಡಿ ನಲಿಯಿತು ಜೀವ ಜಾಲವು.ಕರೆದಮ್ಮನ ದನಿಯೊಳು ಅಪರಿಮಿತ ಹರುಷ.ಕಳೆದೊಯ್ತು ಎಷ್ಟು ಬೇಗನೆ ಇಷ್ಟೊಂದು ವರುಷ.
                                                  !!2!!
ಮಗನಿಂದು ಬೆಳೆದಿಹನು ಎಮ್ಮ ಎತ್ತರದ ಮೇರೆಯ ಮೀರಿ ಮಗಳಾದಾರೊ ನೋಡುಗರ ದೃಷ್ಟಿ ತಾಕುವಂತೆ ಅನುಪಮ ಗರಿಗರಿ
ಜವಾಬುದಾರಿಗಳು ಕಾಯುತ್ತಿವೆ ನಮ್ಮಿಬ್ಬರ ಹೆಗಲೇರಿಕಾಲ ನಡೆದಿದೆ ಎಲ್ಲಾ ಆಗುಹೋಗುಗಳ ಅಳತೆಗಳ ಮೀರಿ. 
                                           !!3!!
ರೆಕ್ಕೆ ಬಲಿತ ಹಕ್ಕಿಗಳು ಹಾರಿಹೋದ ಬಳಿಕ ಉಳಿದ ನಾವಿಬ್ಬರುಉಸಿರಿನ ಕೊನೆಯತನಕ ನಮಗೆ ನಾವೇ ಒಬ್ಬರಿಗೊಬ್ಬರು ಅದ ಬಿಟ್ಟರೆ ಉಳಿದವನೆಂದರೆ ಆ ದೇವರು ಇನ್ಯಾರೂ ತಿರುಗಿ ನೋಡರು.
                                              !!4!!
ಜಗದ ನೋಟಕೆ ನಾನು ನೀನು
ನಿಜ ಸತಿಪತಿಗಳಾದರೇನು
ನನಗೆ ನೀನು ನಿನಗೆ ನಾನು
ನನಗೆ ನೀನು ನಿನಗೆ ನಾನು
ನಾವೇ ಹಡೆದ ಮುದ್ದು ಕಂದಮ್ಮಗಳಲ್ಲವೇನು.

ಶುಭೋದಯ ಶುಭದಿನ ಗೆಳೆಯರೇ

ವೈಲೇಶ.ಪಿ.ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
22/10/2016

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು