ಹಣತೆ ವೃಷ್ಠಿ

ಹಣತೆ ವೃಷ್ಠಿ
~~~~~~~

ಮನುಜ ಹಚ್ಚಿದ ಹಣತೆಯ ಗತಿ ನೋಡಿ
ಸೀಮಿತ ವೆಚ್ಚದ ತೈಲ, ಹತ್ತಿಯ ಬತ್ತಿಯ
ತುದಿಯ ಅಗ್ನಿ, ಬತ್ತಿದ ಹಣತೆಯ ತಳದಿ
ಸೇರಿ ಉರಿದು ಕತ್ತಲ ಜೊತೆಗೆ ಸೆಣೆಸಾಡಿ
ಆರಿ ಹೋಗಿದೆ ಬೆಳಗೆದ್ದು ನೀವೇ ನೋಡಿ

ಹಚ್ಚಿದ ಹಣತೆಯ ಬುಡದಲ್ಲಿ ಕತ್ತಲು
ಕಾಯುತ್ತಲಿವೆ ವಿರೋಧಿಸಿ ಸುತ್ತಲೂ
ಮತಾಪು ಪಟಾಕಿ ಸುರುಸುರು ಬತ್ತಿಯ
ವಿರೋಧಿಸಿ ಮಾಡಿಕೊಳ್ಳದೇ ಆತ್ಮಹತ್ಯೆ
ಮಾಡಿರುವೆ ಮನುಜ ನಿನ್ನ ಕೃತ್ಯವ ಬೆತ್ತಲು 

ಎನಗೆ ವಹಿಸಿದ ಕಾರ್ಯವ ನಾ ಮಾಡಿಹೆ
ಕತ್ತಲ ಹತ್ತಿಕ್ಕುವ ಪ್ರಯತ್ನದಲಿ‌ ಸೋತಿಹೆ
ಎಣ್ಣೆಬತ್ತಿಯು ಮುಗಿದು ಕತ್ತಲಲಿ ಹೂತಿಹೆ
ಹಚ್ಚಿಟ್ಟ ಹಣತೆಯ ಸಡಗರದಿ ನೀ ಮರೆತಿಹೆ
ಎನಗಾರ ಬೆಂಬಲವಿಲ್ಲ ಎಂದಿವೆ ದೀಪಗಳು

ಬೂಟಾಟಿಯ ಬಿಟ್ಟು ಸತ್ಯದೆಡೆ ದೃಷ್ಟಿ
ನಿರತವೂ ಸಾಗುತಾ ಬಂದಿದೆ ಸಮಷ್ಟಿ
ಸಕಲವೂ ದೇವನದೇ ಅಲ್ಲವೇ ಸೃಷ್ಟಿ
ತೊಲಗಲಿ ಅಜ್ಞಾನ ತಮದ ಕಪಿ ಮುಷ್ಟಿ
ಹಚ್ಚುತ್ತಲೇ ಇರಬೇಕು ನಿರುತ ಹಣತೆ ವೃಷ್ಠಿ

ಹಣತೆಗರಿವಿದೆ ಅದರ ವಯಸ್ಸು ಅಯಸ್ಸು
ನಮಗುಳಿದಿದೆ ನಿತ್ಯದ ಉತ್ಸಾಹ ಹುಮ್ಮಸ್ಸು
ನಿಲ್ಲಿಸದಲೇ ಮುಂದುವರಿಯಲಿ ಪ್ರಯತ್ನಿಸು
ನಿರಂತರ ಪ್ರಯತ್ನಕಷ್ಡೇ ಸಿಗುವುದು ಯಶಸ್ಸು
ನಿಮ್ಮಿಂದಲೇ ನಡೆಯಲಿ ಜಗದೋಳು ಶ್ರೇಯಸ್ಸು

ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೨೧/೧೦/೨೦೧೭

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು