ಚಟ ಚಟ್ಟ
ಚಟ ಚಟ್ಟ
~~~~~~~~~~~
ಅವನೊಬ್ಬ ಇದ್ದ ಕುಡುಕ
ಸಂಸಾರ ಎಂದರೆ ಸಿಡುಕ
ಕುಡಿದೇ ಇದ್ರೆ ಕೈ ನಡುಕ
ಬೆಳಗ್ಗೆದ್ದು ಹೆಂಡ ಹುಡುಕ
ತಿಂಡಿ ಒಂದು ಮನೆಯಲ್ಲಿ
ಮಧ್ಯಾಹ್ನ ಊಟ ಕೊಟ್ಟಲ್ಲಿ
ತೂರಾಡುತ್ತಾ ಬೀದಿಯಲ್ಲಿ
ರಾತ್ರಿ ಮಾತ್ರ ಚರಂಡಿಯಲ್ಲಿ
ಯಾರದೇ ಕೆಲಸ ಮುಗಿಸಿ
ಕೊಟ್ಟ ಕಾಸು ಜೇಬಿಗೆ ಇಳಿಸಿ
ಹುಟ್ಟು ಗುಣ ಬಿಡದ ದೈನೇಸಿ
ಕುಡಿತ ಬಿಡಲಾರದ ಬೇವರ್ಸಿ
ಮನೇಲಿ ಮಲಿಗಿದ್ದು ಕನಸು
ಮಲಗಿದ ಮನೆಯಲಿ ಸುಸ್ಸು
ಏನೇ ಆದರೂ ಗಟ್ಟಿ ಪಿಂಡ
ಅನಾಥನಂತೆ ಸಾವು ಕಂಡ
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೨೫/೧೦/೨೦೧೭
Comments
Post a Comment