ನಾನೊಂದು ಕಂದಾ

ನಾನೊಂದು ಮುದ್ದು ಮುದ್ದಾದ ಕಂದ
ಎನ್ನ  ಕಂಡರೆ ಅಬಾಲವೃದ್ದರಾದಿಯಾಗಿ
ಎಲ್ಲರಿಗೂ ಮಹದಾನಂದ
ಕಚ್ಚಿ ಕಚ್ಚಿ ನುಡಿಯುತ್ತಿಹರು ಮುದ್ದು ಕಂದ
ಅಪ್ಪನೆಂದರು ನಮ್ಮೂರಲ್ಲಿ ನಾ ಬಲು ಚೆಂದ

ಅಮ್ಮನ ಪ್ರೀತಿಯ  ಮೂರನೇ ಕಂದ
ನಮ್ಮಣ್ಣ ನನಗಿಂತ ಚೆಲುವಿನ ಶ್ರೀಗಂಧ
ಅಕ್ಕನೆಂದರೆ ಅಪ್ಪನ ಮುದ್ದಿನ ಕಂದ
ಎಲ್ಲರ ಪ್ರೀತಿಯಿಂದ ಎನಗಾನಂದ

ಸಾವಿರ ಪಕಳೆಗಳ ಹೂವಿನ ಮನಸ್ಸಿನ
ಪಕ್ಕದ ಮನೆಯ ಪದ್ದಕ್ಕನ ಅತಿ ಮುದ್ದಿನ
ಪಚ್ಚಿ ಅಕ್ಕ ಏನವಳ ರೆಕ್ಕೆ ಪುಕ್ಕ ನೋಡೋಣ
ಎಂದರೆ ಯಾರೂ ಎತ್ತಿಕೊಂಡು ಹೋಗರೆನ್ನ 
ಅಕ್ಕ ಅಂಗನವಾಡಿಯಿಂದ ಬಂದಾಗ ಅಳಬೇಕಿನ್ನ.

ಹೊತ್ತು ಹೊತ್ತಿಗೆ ತುತ್ತು ತಿನ್ನಿಸುವ ಅಮ್ಮ
ಬರೋತನಕ ಅಜ್ಜಿಯೇ ಎನ್ನ ಪ್ರೀತಿ ಅಮ್ಮ
ಅಜ್ಜಿಯಿಂದ ಜಳಕ ಶರೀರ ಭಾದೆಗೆ ಪುಳಕ
ಹಾಲು ಹಿಟ್ಟಿನ ಮಿಶ್ರಣದ ಮುದ್ದೆಯ ಬಳಿಕ
ಸಾಂಭ್ರಾಣಿ ಹೊಗೆಗೆ ನಿದ್ದೆ ಅಮ್ಮ ಬರೋತನಕ.

ಅಮ್ಮ ಬರುವ ಮುನ್ನ ಕೆಲಸದಿಂದ
ಅಪ್ಪ ಬಂದರು ಬಲು ಮುದದಿಂದ
ಕೈಕಾಲು ಕುಣಿಸಿದೆ ಆನಂದದಿಂದ
ಮುತ್ತು ಹತ್ತು ಸಿಕ್ಕಿದ ಸಂತೋಷದಿಂದ
ಮೈಮರೆತೆ ಅಕ್ಕ ಅಣ್ಣರ ಪ್ರೀತಿಯಿಂದ

ಬಂದು ಹೋಗುವ ನೆಂಟರಿಷ್ಟರು
ಬರಿಯ ಮುತ್ತು ಕೊಟ್ಟು ಹೋದರು
ಅಮ್ಮ ಇರದಿರೆ ಯಾರೂ ಕಾಣರು
ಅಮ್ಮ ಇದ್ದರೆ ಎಲ್ಲಾ ಬರುವರು
ಜೊತೆಗೆ ಪ್ರೀತಿಯ ಹೊತ್ತು ತರುವರು

ನಾನೊಂದು ಮುದ್ದು ಮುದ್ದಾದ ಕಂದ
ಎನ್ನುವ ಕಂಡರೆ ಎಲ್ಲರಿಗೂ ಆನಂದ
ಅಮ್ಮ ಅಜ್ಜಿ ಅಪ್ಪ ಅಣ್ಣ ಅಕ್ಕನೆಂದರೆ
ತುಂಬಿದ ಅಕ್ಕರೆಯ ಉನ್ಮಾದ ಆನಂದ.

ಸಿಡಿಲು
ವೈಲೇಶ ಪಿ ಎಸ್ ಕೆ.ಬೋಯಿಕೇರಿ
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
ವಿರಾಜಪೇಟೆ ದ.ಕೊಡಗು

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು