ಗಝಲ್ ೨

ಗಝಲ್ ೨
~~~~~~~

ಕರೆಯದೇ ಬಂದವನು ನೀನೇ ಗೆಳೆಯ
ಮರು ನುಡಿಯದೇ ನಡೆದವನು ಸಹ ನೀನೇ ಗೆಳೆಯ

ನಿನಗಾಗಿ ನಿನ್ನ ಏಳಿಗೆಗಾಗಿ ಏನೇನೆಲ್ಲಾ ನುಡಿದೆ
ನೀನು ನೀನಾಗುವ ಮುನ್ನ ಮಿಥ್ಯೆಯ ಅರುಹಿದವ ಸಹ ನೀನೇ ಗೆಳೆಯ 

ಅನ್ಯರ ನುಡಿಗೆ ನಿನ್ನ ನೀನೇ ಮಾರಿಕೊಂಡೆ
ಅರುಹಿದವರ ಒಳಗುದಿಯ ಅರಿಯದೇ ಹೋದವನು ಸಹ ನೀನೇ ಗೆಳೆಯ

ಶಾಂತ ಸರೋವರಕೆ ಕಲ್ಲನ್ನು ಎಸೆದೆ
ಸರೋವರದಿ ಅಡಗಿದ ಬೇಗುದಿಯ ಮರೆತವನು ಸಹ ನೀನೇ ಗೆಳೆಯ 

ಈ ಧರೆಯೊಳು ಇದೆಲ್ಲವೂ ನಿತ್ಯವೆಂದು  ನೀನಂದೆ
ನಿನ್ನೊಳ ಮಿಥ್ಯೆಯ ನಿನಗರಿಯದೇ ಹೊರ ತಂದವನು‌ ಸಹ ನೀನೇ ಗೆಳೆಯ

"ಸಿಡಿಲು" ನ ಆಗಸದಿ ಚುಕ್ಕಿಯಾಗುವ ಅವಕಾಶ ಇತ್ತು.
ಆಗಸದ ಚುಕ್ಕಿಯಾಗದೆ ಕಪ್ಪು ಚುಕ್ಕಿಯಾದ ಮಸಿ ಸಹ ನೀನೇ ಗೆಳೆಯ

"ಸಿಡಿಲು"
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೨೫/೧೦/೨೦೧೭

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು