ಜಗ ನಿನದೇ

ಜಗ ನಿನದೇ
~~~~~~~

ನಿನಗೆ ಏನ ನೀಡಲಿ ತಂದೆ
ನಿನ್ನ ಅನುಗ್ರಹದಿಂ ಬಂದೆ
ನಿನ್ನದೇ ನಿಮಿತ್ತಕೆ ಇಳಿಸಿದೆ
ನಿನ್ನ ಮನದಿಚ್ಚೆ ಕುಣಿಸಿದೆ

ಅಲ್ಪ ನಾನೇನನೂ ಬೇಡದೇ
ನೀಡುವ ಮನವ ಮಾಡಿದೆ
ನಿನ್ನ ನಾನರಿಯದೇ ಹೋದೆ
ಅದು ಇದೇ ಬೇಕೆಂದು ಎಂದೆ

ನಿನ್ನ ಕೊಡುಗೈಯ ಮುಂದೆ
ಬಲು ಎಳೆಯನು ನಾ ತಂದೆ
ಚಿನ್ನವೆ ಬೇಕೆಂದು ಬೇಡಿದೆ
ತುತ್ತು ಅನ್ನವ ನೀ ನೀಡಿದೆ

ಜಗಜ್ಯೋತಿಯು ನೀನೇ
ತೃಣಮಾತ್ರವು ನಾನೇನೆ
ನಾನೇನು ನೀಡಲಾರನೇ
ಅಣುರೇಣುವೂ ನಿನದೇನೆ

ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೧/೧೧/೨೦೧೭

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು