ಕರುನಾಡ ಸಿರಿದೇವಿ ~~~~~~~~~~ ಕರುನಾಡ ಸಿರಿದೇವಿ ಕೊಡವರ ಕುಲದೇವಿ ಕವೇರನಾ ಕುವರಿ ಬಾಮ್ಮ ಲೋಕಪಾವನೆ ನೀನೆ ಬಾರಮ್ಮ ||ಪ|| ಮೂರು ಗಿರಿ ನಡುವಿನಲಿ ಮಳು ಮುಳುಗಿ ಮಡುವಿನಲಿ ಮಡಿಯಾಗುವ ಮುನ್ನ ಬಾಮ್ಮ ಕುಂಡಿಕೆಯ ತುಂಬುತಲಿ ಬಾರಮ್ಮ ||೧|| ಮುನಿ ಅಗಸ್ತ್ಯನ ಸತಿಯೆ ಭೂದೇವಿಯ ಸೊಸೆಯೆ ಭಕ್ತ ಜನರುದ್ದರಿಸೆ ಬಾಮ್ಮ ನಿನಗಾಗಿ ಕಾದಿಹೆವು ಬಾರಮ್ಮ ||೨|| ತ್ರಿವೇಣಿ ಸಂಗಮದಿ ದಂಪತಿಯು ಸಂಭ್ರಮದಿ ಕಾದಿಹರು ನಿನ್ನಯ ಜಲದಿ ಕಾವೇರಿ ಮಾತೆ ದಯೆ ತೋರಮ್ಮ ||೩|| ಸಿಡಿಲು ವೈಲೇಶ ಪಿ ಯೆಸ್ ಕೊಡಗು ಚಾಲಕ ಕರಾರಸಾಸಂಸ್ಥೆ ಮಡಿಕೇರಿ ೧೩/೧೦/೨೦೧೭