೨೨ ತೋಟ

೨೨ ತೋಟ
~~~~~~~

ಅಪ್ಪ ನೆಟ್ಟ ಅಸಲಿ ಫಸಲಿನ ತೋಟ
ಬೆಲೆ ಏರಿದೊಡೆ ಆಸ್ತಿಯೆಡೆಗೆ ನೋಟ
ಜಗಳ ಮುಗಿಸಲು ಎರಡೇ ೨೨ ತೋಟ
ಒಂದು ಎದುರಾಳಿಗೆ ಮತ್ತೆ  ಕೊನೆ ಆಟ 

ಮನಕೆ ತೋಟಕೆ ಸುತ್ತಿದ ಬೇಲಿಯ
ಕಿತ್ತೆಸೆಯಿರಿ ತಿಂದರೆ ತಿನಲಿ ನಮ್ಮಯ
ಸಹೋದರರಲ್ಲವೇ ಇದ್ದರೆ ಅದೆಲ್ಲಿಯ
ಸಂಪತ್ತು. ಸತ್ತರೆ ಯಾರಿಗಾಯ್ತು ನ್ಯಾಯ

ನಾನು ನನದೆಂಬ ಹುಚ್ಚು ಬಿಡದೇ
ನಮ್ಮವರೆಂಬ ಹಣತೆ ಹಚ್ಚುವುದೇ ?
ಅಸಾಧ್ಯ. ಭ್ರಮೆಯ ಅದೀನನಾದವಗೆ
ಹಮ್ಮು ಬಿಮ್ಮನು ಹೊತ್ತವರೇ ಮಿಗೆ

ಹಣದ ಮತ್ತು ಮುಗಿದು ಹೆಣವಾಗಲು
ತೆರೆದಾಗ ರೌರವ ನರಕದ ಬಾಗಿಲು
ವ್ಯಾಮೋಹ ಬಿಡದೆ ಧನವೇ ಕನಸಲು
ಇನ್ಯಾವ ಪವಾಡ ಬೇಕು ಅರಿವಾಗಲು

ವೈಲೇಶ ಪಿ ಯೆಸ್ ಕೊಡಗು
೨೭/೨/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ