ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.
ನಾ ಕಂಡಂತೆ ಕವಿ ಸಾಹಿತಿ.:- ಅನುಪಮಾ ಸುಲಾಖೆ. ಇವರು ಶ್ರೀಮತಿ ಅನುಪಮ ಸುಲಾಖೆ ಗೃಹಿಣಿ.ಅನಿಲ್ ಕುಮಾರ್ ಸುಲಾಖೆ ಇವರ ಧರ್ಮಪತ್ನಿ ಶಿವಮೊಗ್ಗ ನಗರದ ಬಾಲಚಂದ್ರ ರಾವ್ ನಾಜರೆ ಮತ್ತುಗಾಯತ್ರಿ ನಾಜರೆ ದಂಪತಿಯ ಪುತ್ರಿ. ಶಿವಮೊಗ್ಗದ ಮಕ್ಕಳ ವಿದ್ಯಾ ಸಂಸ್ಥೆ ಮತ್ತು ಕಸ್ತೂರಿ ಬಾ ಕಾಲೇಜಿನಲ್ಲಿ ಪಿಯುಸಿಯವರೆಗೆ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ್ದಾರೆ. ವೃತ್ತಿ ಯಿಂದ ಗೃಹೋದ್ಯಮಿಯೂ ಆಗಿರುವ ಇವರು ಓದು, ಬರೆಹ, ಗಾಯನ, ಯೋಗ, ಕರಕುಶಲತೆಯನ್ನು ಪ್ರವೃತ್ತಿಯಾಗಿ ಉಳಿಸಿಕೊಂಡಿದ್ದಾರೆ. ಇವರು ದೈನಂದಿನ ಸುಭಾಷಿತ ರಚನೆಯಲ್ಲಿ ಸಿದ್ಧಹಸ್ತರು ಈವರೆಗೆ ಸುಮಾರು ೧೩೪೦ ಸುಭಾಷಿತ ರಚನೆ ಮಾಡಿದ್ದಾರೆ. ಜೊತೆಗೆ ಅಂತರ್ಜಾಲದ ಇನ್ನಿತರ ಸಾಹಿತ್ಯಿಕ ಬಳಗಗಳಲ್ಲಿ ಪ್ರತಿದಿನ ಹಂಚಿಕೊಳ್ಳುತ್ತಿದ್ದಾರೆ. ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ದಿನಪತ್ರಿಕೆ, ಪಾಕ್ಷಿಕ ಪತ್ರಿಕೆ, ಮಾಸಪತ್ರಿಕೆಗಳಲ್ಲಿ ಹಾಗೂ ಪ್ರಜಾವಾಣಿ, ಬೆಂಗಳೂರು ವಾಯ್ಸ್, ಪಿಸುಮಾತು, ಜನನಾಡಿ, ಜನ ಮಿಡಿತ, ಸ್ತ್ರೀ ಜಾಗೃತಿ, ದಿ ಜರ್ನಿ ಆಫ್ ಸೊಸೈಟಿ, ಹಂಪಿ ಟೈಮ್ಸ್ ,ಬಳ್ಳಾರಿ ಬೆಳಗಾಯಿತು, ಕಸ್ತೂರಿ ಪ್ರಭೆ, ಇಂದು ಸಂಜೆ ,ನಾಡಿನ ಸಮಾಚಾರ ,ಪ್ರತಿನಿಧಿ, ಮಾಳವಿ ಪತ್ರಿಕೆ, ಟೈಮ್ಸ್ ಆಫ್ ಕರ್ನಾಟಕ. ಮಾನಿನಿ ಪತ್ರಿಕೆಗಳಲ್ಲಿ ಇವರ ಲೇಖನ ಕವಿತೆಗಳು ಪ್ರಕಟವಾಗಿವೆ. ...