ನಮ್ಮ ಪಾಲೆಲ್ಲಿ

ನಮ್ಮ ಪಾಲೆಲ್ಲಿ
~~~~~~~~.
ಏನೆಂದು  ಹೇಳಲಿ ಏನೆಂದು ಕೇಳಲಿ
ಹಸಿವೆಯೇ ಕಾಣಿಸದಾಗಿದೆಯಲ್ಲಾ
ಅಮ್ಮನ ನಡುವಲಿ ಸೀರೆ ಜಾರುತ್ತಿದೆ
ಅಪ್ಪ ನಿನ್ನ ಮೈಯಲಿ ನೆತ್ತರ್ಹರಿದಿದೆ
ಹರಿವ ರಕುತವ ನೋಡೆ ತಲೆ ತಿರುಗಿದೆ.

ಜಗದಗಲ ಭೂಮಿಯಲಿ ನಮ್ಮ ಪಾಲಿಲ್ಲವೇ
ಉಂಡೆಸೆವ ಕೂಳಿನಲಿ ನಮಗಗುಳಿಲ್ಲವೇ
ತುಂಡುಡುಗೆಯನ್ನುಟ್ಟು  ಫ್ಯಾಶನಿಸುವವರೆ
ಮಾನವ ಮುಚ್ಚಲು ನಾ ಕೇಳುವೆನೆಂದರೆ
ಪಾಪ ನೀವು ತೊಟ್ಟಿರುವುದೆ ಅರೆಬರೆ

ಹಣದ ಹಾಸಿಗೆಯಲ್ಲಿ ಮಲಗಿರುವವರೆ
ಹೇಸಿಗೆಯಾಗುವುದು ನಿಮ್ಮ ಕಂಡರೆ
ಕಾಲ್ಹಾದಿ ಕರೆಯ ಸಂದಿಗೊಂದಿಗಳಲ್ಲಿ
ಮಲಗಿದವರ ಕಾಣಲು ನಿಮ್ಮ ಕಣ್ಣುಗಳೆಲ್ಲಿ
ಮನದ ತುಂಬಾ ಹಣದ ಹಸಿವ ತುಂಬಿದ 
ಹೃದಯ ತುಂಬಿ ಮೆರೆದಿದೆ ಅಹಂನ  ಮದ

ಎನ್ನಪ್ಪನಂತೆ ರಕುತವ ಹರಿಸಿ ದುಡಿದವರು ನೀವಲ್ಲ 
ಅಜ್ಜನ ಆಸ್ತಿಗೆ ಅಪ್ಪನ ತೊಪ್ಪಲಿಗೆ ಕಾದಿರುವಿರಲ್ಲ
ಕಂದಗೆ ಹಾಲಿಲ್ಲವೆಂಬ ಹಡೆದಮ್ಮನ ಒಡಲೂರಿಯ
ಬಲ್ಲವರು ನೀವಲ್ಲ ಆಲ್ಕೋಹಾಲ್ ಅರೆನೆಮ್ಮದಿಯ
ನಿಮಗೀಯುವುದಲ್ಲ. ಪಡೆಯುವಿರಿ ಕಾಯಿಲೆಯ
ಬಳುವಳಿಯ ನೀವರಿಯದೇ ವ್ಯರ್ಥ ಈ ಕುಡಿತ.

ಬಿಕ್ಷೆ ಬೇಡುವುದ ಬಿಟ್ಟು ದುಡಿಯಲು ನೌಕರಿ
ನೀಡಲಾರರಿ. ಬಿಎ ಎಂಎ ವಿಧ್ಯೆಯ ಮಾತಿರಲಿ
ಕೊನೆಗೊಂದು ಸಹಿ ಕೂಡ ಬಲ್ಲವರು ನಾವಲ್ಲ
ಸರಕಾರಿ ಕೃಪಾಫೋಷಿತ ಯೊಜನೆ ನಮಗಿಲ್ಲ
ಯೋಜನೆ ತಲುಪಿಸುವ ಯೋಚನೆ ನಿಮಗಿಲ್ಲ
ಇದ್ದುದ ಹಾಳುಗೆಡುವುವ ಬುದ್ಧಿ ಜಗದಿ ಎಲ್ಲ

ವೈಲೇಶ ಪಿ ಯೆಸ್ ಕೊಡಗು
1/3/2017

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ