ತರ್'ಹೀ ಗಝ಼ಲ್ : ೧೬

ತರ್'ಹೀ ಗಝ಼ಲ್ : ೧೬

ಬಿತ್ತವದು ಮೊಳಕೆಯಾಗಲು ಅದೆಷ್ಟು ಕಾಯಬೇಕು
ಮಣ್ಣಹೆಂಟೆ ಕಸವರವಾಗಲು ಅದೆಷ್ಟು ಕಾಯಬೇಕು

ಕವಿ ಗೋವಿಂದನ ಹೆಗಡೆಯವರ ಗಝ಼ಲ್'ನಿಂದ ಮತ್ಲಾವನ್ನು ಪಡೆದಿದ್ದೇನೆ

ಬಿತ್ತವದು ಮೊಳಕೆಯಾಗಲು ಅದೆಷ್ಟು ಕಾಯಬೇಕು
ಮಣ್ಣಹೆಂಟೆ ಕಸವರವಾಗಲು ಅದೆಷ್ಟು ಕಾಯಬೇಕು

ಅಪ್ಪನಂತೆ ಬಲವಂತನಾಗಲು ಅಪಾರ ಆಸೆಯೆನಗೆ
ಒಪ್ಪದಿಂದ ಬಾಳ್ವೆ ಮಾಡಲು ಅದೆಷ್ಟು ಕಾಯಬೇಕು

ಸವಿಯಾದ ಹಣ್ಣು ನಾಲಿಗೆಗೆ ರುಚಿಸುವುದು ಸಹಜ
ಮೊಗ್ಗು ಅರಳಿ ಫಲವಾಗಲು ಅದೆಷ್ಟು ಕಾಯಬೇಕು

ನೀನೆಂದರೆ ಗೆಳತಿ ಅದೇನೋ ಮೋಹ ನೀನೇ ಜೀವ
ನಮ್ಮಿಬ್ಬರ ಭಾವ ಬೆರೆಯಲು ಅದೆಷ್ಟು ಕಾಯಬೇಕು.

ಮೂರು ಹೊತ್ತಿನ ತುತ್ತು ಮನುಜಗೆ ಬಲು ಸುಲಭ
ಮಿಗಗಳು ಬೇಟೆಯಾಡಲು ಅದೆಷ್ಟು ಕಾಯಬೇಕು

ಬರಹಗಳು ಸೊಗಸಾಗಿ ಬರಲೆಂಬುದು ಎಲ್ಲರ ಆಸೆ
"ಸಿಡಿಲ"ನ ಅರಿವು ಮಾಗಲು ಅದೆಷ್ಟು ಕಾಯಬೇಕು

ವೈಲೇಶ ಪಿ ಯೆಸ್ ಕೊಡಗು
೨೦/೨/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ