ಗಝ಼ಲ್ : ೧೮

ಸ್ಪರ್ಧೆಗಾಗಿ

ಗಝಲ್ : ೧೮
~~~~~~~~
ಎಲ್ಲಾ ಮುಗಿದು ಹೋದ ಮೇಲೆ ನ್ಯಾಯಾಲಯದ ತೀರ್ಪು ಬಂದಿದೆ.
ಇನ್ನಾದರೂ ನಾವು ನೀರಿನ ವಿಚಾರದಲಿ ಮುನ್ನೆಚ್ಚರಿಕೆ ಮಾಡಬೇಕಿದೆ.

ರೈತರ ಆರ್ಥಿಕ ಪರಿಸ್ಥಿತಿ ಯಾಕೋ ಯಡವಟ್ಟಾಗಿದೆ ಎನಿಸುತ್ತಿದೆಯೇ.
ಆದರೂ ಬಡ ಜನರ ಅತ್ಮಹತ್ಯೆ ಸಮಸ್ಯೆ ಹೆಚ್ಚಿಸಲು ಅನುವಾಗುತ್ತದೆ.

ದೇಶದ ರಕ್ಷಣೆಗೆ ಯೋಧರು ಸುಖ ದುಃಖಗಳ ತ್ಯಜಿಸುತ್ತಿರುವರು ನಿಜ.
ಅವರ ಸಂತತಿ ಪ್ರಜ್ವಲಿಸುವಂತೆ ಮಾಡುವ ಕರ್ತವ್ಯ ಕೂಡ ನಮ್ಮದೇ

ಮಹಾದಾಯಿ ನೀರು ನಾಡ ರೈತರಿಗೆ ಅಗತ್ಯವಾಗಿ ಬೇಕಾಗಿದೆಯಲ್ಲವೇ
ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ಉಳಿದ ಗಂಟುಗಳ ಬಿಚ್ಚಬೇಕಾಗಿದೆ

ನಮ್ಮದೇ ಕಂದಮ್ಮಗಳ ಬದುಕು ಎತ್ತಿಂದೆತ್ತ ಸಾಗುತ್ತಿದೆ ಎಂಬ ಅರಿವಿಲ್ಲ.
ನಾವು ಉತ್ತಮ ಹಾದಿಯಲ್ಲಿ ನಡೆವಂತೆ ಮಕ್ಕಳ ಮನ ಒಲಿಸಬೇಕಾಗಿದೆ.

ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನ ಗಮನಿಸಿ ನೋವಾಗಿದೆ ಮನ.
"ಸಿಡಿಲು"ನ ಚಿಂತನೆಯು ತಮ್ಮ ಮನದಲ್ಲಿಯೂ ಆರಂಭವಾಗಬೇಕಾಗಿದೆ.

ವೈಲೇಶ ಪಿ ಯೆಸ್ ಕೊಡಗು
೨೪/೨/೨೦೧೮
"

Comments