ಟಿಬೇಟಿಯನ್

ಮಳೆಯಿಲ್ಲ ಬೆಳೆಯಿಲ್ಲ ನಾಡಿನ ಜನರೆಲ್ಲ ಗುಳೆ ಹೊರಡುವ ಪರಿಸ್ಥಿತಿ ಊರ ತುಂಬಾ ರಾಜ್ಯದ ತುಂಬ ಯಾಕೆ ದೇಶದ ತುಂಬಾ ಬರಗಾಲದ ಛಾಯೆ. ಅಸ್ಸಾಮಿಗರ ಹೆಸರಲ್ಲಿ ಬಾಂಗ್ಲಾದೇಶೀಯರ ಆಗಮನ ನಮ್ಮ ಹಕ್ಕಿನ ಉದ್ಯೋಗ ನೆಲ ಜಲದ ಜೊತೆಗೆ ನಮ್ಮವರ ಮೇಲೆ ದೌರ್ಜನ್ಯ ನಾವು ಸಾಕಿದ ಪಶು ಪಕ್ಷಿಗಳು ಅನಧಿಕೃತವಾಗಿ ಅವರಿಗೆ ಆಹಾರ

ಕೂಲಿ ಕೆಲಸವನ್ನು ನಂಬಿ ಹಳ್ಳಿಯಲ್ಲಿ ಉಳಿದವರಿಗೆ ವಲಸೆ ಬಂದವರಿಂದಾಗಿ ಕೂಲಿ ದೊರೆಯುತ್ತಿಲ್ಲ.
ನಗರ ಪಟ್ಟಣಗಳಲ್ಲಿ ಸೆಕ್ಯುರಿಟಿ ಕೆಲಸವೂ ಖಾಲಿ ಇಲ್ಲ ಎಲ್ಲೆಲ್ಲೂ ವಲಸಿಗರೆ ತುಂಬಿಹರಲ್ಲ ಸ್ಥಳಿಕರಿಗೆ ಕೂಳಿಲ್ಲ ಕೆಲಸವು ಇಲ್ಲ ಕೂಲಿಯು ಇಲ್ಲ

ದೇಶಭ್ರಷ್ಟರಾಗಿ ಬಂದರು ಟಿಬೇಟಿಯನರು
ಸಕಲ ಅನಾಚಾರಗಳ ಗೈಯುವರು
ದಣಿವರಿಯದೇ ದುಡಿಯುವರು ಕೇವಲ ಕೆಲವರು.
ಪಾಶ್ಚಾತ್ಯರಿಂದ ಬರುವ ಫಂಡು ಇವರು ತಿಂದುಂಡು
ದುಂಡು ದುಂಡು ಸಾಲಲಿಲ್ಲವಿದವರಿಗೆ ಕೇಳುತಿಹರಿಂದು ಓಟಿನ ಹಕ್ಕು ಹಕ್ಕು ಸಿಕ್ಕರೆ ನಾವೇ ಓಡಬೇಕು ದೇಶಭ್ರಷ್ಟರಾಗಿ ಮುಂದೆಂದಿಗೂ

ಹೆಸರಿಗೆ ಬುಧ್ಧವಾದಿಗಳು ತಿಂಬುವುದಕ್ಕೆ ಬೇಕು ಜಗದೆಲ್ಲ ಪ್ರಾಣಿಗಳು ಅವರ ಗುರುಗಳೋ ಬೇಕು
ಬೇಕಾದ್ದು ತಿನ್ನಿ ಆದರೆ ಸಾಕಬೇಡಿ ಅಂದರೆ ಬೇಕು
ತಿನ್ನಲು ಬೇರಾರೋ ಸಾಕಲು. ಗುರುಗೆ ಏನನ್ನಬೇಕು
ಬೆಳೆ ಬೆಳೆಯುವುದರಲ್ಲಿ ನಿಸ್ಸಿಮ್ಮರು ಕಲಿಯಬೇಕು

ಅವರ ತಂತ್ರಜ್ಞಾನ ನೋಡಿ ನಮ್ಮ ರೈತರು
ಮನೆ ಮನೆಯಲ್ಲಿ ಬೈಕು ಕಾರು ಟ್ರ್ಯಾಕ್ಟರು
ಮನ ಮಂದಿಯೆಲ್ಲಾರು ದುಡಿಯುವ ರೈತರು 
ಹೊಲದಲ್ಲೊ ಸಂತೆಯಲ್ಲೊ ಸೈ ಎಲ್ಲಾದರೂ

ಅವರ ದೇವಳ ಚಿನ್ನದಿಂದ ತಯಾರಿ
ನಮ್ಮದೋ ಕಲ್ಲು ಮಣ್ಣಿನ ತರಿತರಿ
ಅವರ ದೇವಳಕ್ಕೆ ಭಾರಿ ವೀಕ್ಷಕರು
ನಮ್ಮ ದೇಗುಲವ ಕೇಳುವವರಾರು

ಹಿಂದೆಲ್ಲಾ ಕುಶಾಲನಗರ ಬರೀ ಹೋಬಳಿ
ಟಿಬೇಟಿಯನರು ಬಂದ ಮೇಲೆ ಹೂಬಳ್ಳಿ

ವೈಲೇಶ ಪಿ ಯೆಸ್
ಕೊಡಗು
16/02/2017

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ