ನಗುಮೊಗ

ನಗು ಮೊಗ
~~~~~~~
ಮುಳುಗಿರಲಿ ಮಿಗಿಲಿರಲಿ
ಸುಖ ದುಃಖವು ಸುರಿದಿರಲಿ
ಬಯಕೆಯ ಭವ್ಯ ಬಸಿರಿರಲಿ
ತನುಮನವ ಒಡೆವ ನೋವಿರಲಿ 

ತನ್ನ ತಾ ಮರೆತಿರಲಿ‌
ಇತರರೊಳು ಬೆರೆತಿರಲಿ
ಜನಜಂಗುಳಿಯಲಿ ಜರಿದಿರಲಿ
ಏಕಾಂತದೊಳು‌ ಏಕಾಂಗಿಯಾಗಿರಲಿ

ಕೆಲಸದೊಳು ಕರಗಿರಲಿ
ಸಂಚಿನೊಳು ಸಿಲುಕಿರಲಿ
ಸಂಚಾಕಾರವೇ ಸಂಚಯಿಸಿರಲಿ
ಸಾವಿರ ಶತ್ರುಗಳ ಸವಾಲುಗಳಿರಲಿ

ಸಂಯಮವು ಜೊತೆಗಿರಲಿ
ಮೊಗದಿ ನಗುವು ನಗುತಿರಲಿ
ನಗುವೇ ಮಿಗಿಲೆಂಬ ಅರಿವಿರಲಿ
ಸಾವೇ ಹೊಸಿಲ ಸೋಕಿ ನಿಂತರೂ
ನಗುವೆಂಬ ನಗವು ನಮ್ಮ ನೋಡಿ ನಗುತಿರಲಿ 

ವೈಲೇಶ ಪಿ ಯೆಸ್ ಕೊಡಗು
೧೭/೨/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ