ಪಂಚತಾರಾ ಅತಿಥಿ ಗೃಹ
ಪಂಚತಾರ ಅತಿಥಿ ಗೃಹ
~~~~~~~~~~~~
ಕೋಟಿ ಕೋಟಿ ಬೆಲೆ ಬಾಳುವ ಪಂಚತಾರಾ ಅತಿಥಿ ಗೃಹ ಇಲ್ಲಿತ್ತು
ಇಲ್ಲಿಯೇ ಇತ್ತು.ಅಲ್ಲಿಯೂ ಇತ್ತು ಹಿಂದೆ ಅಲ್ಲಲ್ಲಿ ಅದೇ ತುಂಬಿತ್ತು.
ಪಾಪ ನಿಮಗೆಲ್ಲಾ ತಿಳಿದಿತ್ತು. ತಿಳಿದೂ ಇದೆ. ಅದಕೆ ಜೀವವಿತ್ತು.
ಅದರ ಬಗಲಲ್ಲಿ ಎಲ್ಲರಿಗೆ ಎಲ್ಲವೂ ಸ್ವಾಭಾವಿಕವಾಗಿ ಸಿಗುತ್ತಿತ್ತು.
ಪರಮ ಶುಧ್ಧ ಸಂಪದ್ಭರಿತ ಸಿಹಿ ಕಹಿ ಹುಳಿ ಹೂವು ಹಣ್ಣು ಹಂಪಲು
ಚಿಗುರು ಒಗರು ಕಾಯಿ ಅವರವರ ಭಾವಕ್ಕೆ ತಕ್ಕ ಆಹಾರ ದೊರಕುತ್ತಿತ್ತು.
ಸಸ್ಯಾಹಾರಿಗಳಿಗೆ ಸಸ್ಯಾಹಾರ ನೀಡುತಲಿತ್ತು ಮಾಂಸಾಹಾರಿಗಳಿಗೆ
ಅಚ್ಚುಮೆಚ್ಚಿನ ಮಾಂಸಾಹಾರದ ಮಹತ್ತೋಪಚಾರ ದೊರಕುತ್ತಿತ್ತು.
ಅಲ್ಲಿ ಎಲ್ಲರೂ ಮಾಲೀಕರೇ ಅವರವರ ಹಕ್ಕುಗಳ ಮಂಡಿಸುವವರೇ
ಅಷ್ಟೇ ಅಲ್ಲ ಅಲ್ಲಿ ಎಲ್ಲರೂ ಬಾಗಿಲು ಕಾಯುವವರೇ ಬಾಗಿಲು
ಕಾಯುವವರ ಕಣ್ತಪ್ಪಿಸಿ ಒಳ ನುಸುಳುವವರೇ ಎಚ್ಚರ ತಪ್ಪಿದರೆ
ಕಾಯುವವರಿಗೆ ಅನಾಯಾಸವಾಗಿ ಆಹಾರವಾಗುವವರೇ.
ಈಗಿನ ಪಂಚತಾರಾ ಹೋಟೆಲುಗಳಂತೆ ಕಟ್ಟುನಿಟ್ಟಿನ ನಿಯಮವಿರಲಿಲ್ಲ.
ಜೇಬಿನ ತುಂಬಾ ಝಣಝಣ ನೋಟು ಗರಿಗರಿ ಸೂಟು ಬೂಟು ಬೇಕಿರಲಿಲ್ಲ.
ಉದರಿ ಬರೆವ ಉದ್ದುದ್ದ ಪುಸ್ತಕ ಅದಕ್ಕೆಂದೆ ಓದಿದ ಮಸ್ತಕಗಳು ಇರಲೇ ಇಲ್ಲ.
ಹಾಗಿದ್ದರೂ ಹಸಿದ ಹೊಟ್ಟೆಯ ತುಂಬಾ ತಿಂದು ಮರಿಗಳಿಗೆ ಕಚ್ಚಿ ತರಬಹುದಿತ್ತು.
ಕ್ರಿಮಿ ಕೀಟಾದಿ ಹಕ್ಕಿಪಕ್ಕಿಗಳಿಗೂ ಪ್ರವೇಶವಿತ್ತು ಗಿರಾಕಿಗಳಿಂದಲೇ ಬೇಕಾಗುವ
ಆಹಾರ ತಯಾರಿಕೆಯ ಸಕಲವೂ ಸಿಗಬೇಕಿತ್ತು. ಗಿರಾಕಿಗಳು ನೋಟಗಳನು
ಎಳೆಯದೇ. ಒಡಲಿಂದ ಉಸಿರನ್ನೆಳೆದು ಇಂಗಾಲದ ಡೈಆಕ್ಸೈಡ್ ನೀಡಬೇಕಿತ್ತು.
ನೀಡಿದ ವಾಯು ಇಂಗಾಲದ ಡೈಆಕ್ಸೈಡ್ ಗೆ ತಕ್ಕ ಅಮ್ಲಜನಕ ಪಡೆಯಬಹುದಿತ್ತು.
ಮುಂದೆ ಬರಲಿದ ಕೋಟಿ ಕೊಟ್ಟರು ಸಿಗದ ವಾಯು ಪಡೆದು ಪ್ರಾಣವಾಯು
ನೀಡಿದ ಆಲದ ಮರದ ಕೃತಕ ಮೇಣದ ಬೊಂಬೆಗಳು. ಮುಂದಿನ ಪೀಳಿಗೆಗಳಿಗೆ
ನೋಟಕೆ ಮೇಣದ ಗೊಂಬೆಗಳಾಗುವ ಅದೆಷ್ಟೋ ಜೀವರಹಿತ ಜೀವಸಹಿತ
ನೆನಪುಗಳೊಂದಿಗೆ ಪ್ರಕೃತಿ ದತ್ತ ಪಂಚತಾರಾ ಅತಿಥಿ ಗೃಹವೂ ಸೇರಿಕೊಳ್ಳುವ
ದಿನಗಳು ಬಹುತೇಕ ಹತ್ತಿರದಲ್ಲೇ ಇವೆ ಎನ್ನಲೇ
ವೈಲೇಶ ಪಿ ಯೆಸ್ ಕೊಡಗು
೨೦/೨/೨೦೧೮
Comments
Post a Comment