ಹುಚ್ಚು ಮನಸ್ಸು

ಹುಚ್ಚು ಮನಸ್ಸು
~~~~~~~~~
ಮನಸ್ಸೆಂಬುದು ಹುಚ್ಚು ಹೊಳೆ
ಒಮ್ಮೊಮ್ಮೆ ಹುಚ್ಚೆದ್ದ ಬಿರುಮಳೆ
ಮಗದೊಮ್ಮೆ ಸುರಿವ ಸೋನೆ
ತೋಟದಿ ಬಾಗಿದ ಬಾಳೆಗೊನೆ
ಸೆಟೆದು ನಿಂತರೆ ಕಲ್ಲಿನ ಮೊನೆ

ನೋವು ಕೊಟ್ಟರೆ ನೋವನ್ನೇ ಕೊಡುವುದು
ಸಂತಸವನ್ನಿತ್ತರೆ ಸುಖವ ಕೊಡುವುದದು
ನೀವಿತ್ತ ಪ್ರತಿಯೊಂದು ನಿಮಗೇ ಮರಳುವುದು
ಕಡಲ ತೀರದ ಮಳಲ ಮೇಲಿನ ನಡೆಯಲ್ಲವದು
ಮರೆತೆಂದಿಗೂ ದುಷ್ಟರ ಬಳಿ ಸುಳಿಯಲಾರದು

ಅನ್ಯರು ತನ್ನಂತೇ ಎನದೇ ಈ ಮನುಜರು
ಮನಸ್ಸಿಗೆಂದೂ ಮನ್ನಣೆ ಕೊಡಲಾರರು
ಮನಸನ್ನೊಮ್ಮೆ ಕೇಳಿ ಮನಸಿರುವವರು
ತಮ್ಮ ಕೃತ್ಯ ಅಕೃತ್ಯ ಸರಿಯಾದದೇ ಎಂದು
ನಮ್ಮ ಅಕೃತ್ಯವನ್ನೆಂದು ಮನ ಒಪ್ಪಲಾರದು
ಅದಕ್ಕೆನ್ನುವರು ಸುಕೋಮಲ ಮನಸ್ಸೆಂದು 

ಕಣ್ಣು ಹೋದ ಕಡೆ ಮನಸ್ಸು ಹೋಗಲಹುದೇ
ಮನಸ್ಸು ಹೋದ ಕಡೆ ಮನುಜ ಹೋಗಲಹುದೇ
ಮನದ ಮಾತಿಗೆ ಸೋತು ನಿಂತರೆ ಮನುಜ ನಿನಗಿಲ್ಲ
ಸಂಘ ಜೀವನ ಸರಪಳಿ ಕಟ್ಟಿದ ಮಂಗನಂತೆ ಬಾಳೆಲ್ಲ
ಅರಿತು ಬೆರೆತು ಕಲೆತು ಕಲಿತು ನಡೆಯುವ ಬಾಳೆಲ್ಲ

ವೈಲೇಶ ಪಿ ಯೆಸ್ ಕೊಡಗು
18/2/2017

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ