ಚಳಿಚಳಿ

ಚಳಿಚಳಿ
~~~~~
ಚುಮುಚುಮು ಚಳಿಯಲ್ಲಿ
ಅರೆಬರೆ ನಿದಿರೆಯಲಿ ಪಕ್ಕದಲ್ಲಿ
ಕೈಚಾಚಿ ತಡಕಾಡಿದಂತಿಲ್ಲಿ
ಅವಳಿರುವಳು ಊರಿನಲ್ಲಿ

ನಾನೊಬ್ಬನೇ ಡಬಲ್ ಕಾಟಿನಲ್ಲಿ
ಕರೀ ಕಂಬಳಿಯೇ ಜೊತೆಯಲ್ಲಿ
ಜಾಗರಣೆ ಒಂದೇ ಕಣ್ಣಂಚಿನಲಿ
ಬೆಳಗ್ಗೆದ್ದು ಹೊರಡುವೆ ಕ್ಷಣದಲ್ಲಿ 

ಮನೆಯಲಿ‌ ಇಲ್ಲದಿರಲಾಕೆ
ಶ್ವಾನ ಕೂಡಾ ಅಣ್ಣಾ ಯಾಕೆ
ಅಮ್ಮನನು ಊರಲ್ಲೇ ಬಿಡಬೇಕೆ
ಬೇಗ ಕರೆತರಲಾರೆಯೇಕೆ ಎನ್ನಬೇಕೆ

ವೈಲೇಶ ಪಿ ಯೆಸ್ ಕೊಡಗು
೨೦/೨/೨೦೧೭

ವೈಲೇಶ ಪಿ ಯೆಸ್ ಕೊಡಗು
20/2/2017

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ