ಕರುನಾಡ ಸಿರಿದೇವಿ

ಕರುನಾಡ ಸಿರಿದೇವಿ
~~~~~~~~~~

ಕರುನಾಡ ಸಿರಿದೇವಿ
ಕೊಡವರ ಕುಲದೇವಿ
ಕವೇರನಾ ಕುವರಿ ಬಾಮ್ಮ
ಲೋಕಪಾವನೆ ನೀನೆ ಬಾರಮ್ಮ ||ಪ||

ಮೂರು ಗಿರಿ ನಡುವಿನಲಿ
ಮಳು ಮುಳುಗಿ ಮಡುವಿನಲಿ
ಮಡಿಯಾಗುವ ಮುನ್ನ ಬಾಮ್ಮ
ಕುಂಡಿಕೆಯ ತುಂಬುತಲಿ ಬಾರಮ್ಮ ||೧||

ಮುನಿ ಅಗಸ್ತ್ಯನ ಸತಿಯೆ
ಭೂದೇವಿಯ  ಸೊಸೆಯೆ
ಭಕ್ತ ಜನರುದ್ದರಿಸೆ ಬಾಮ್ಮ
ನಿನಗಾಗಿ ಕಾದಿಹೆವು ಬಾರಮ್ಮ ||೨||

ತ್ರಿವೇಣಿ ಸಂಗಮದಿ
ದಂಪತಿಯು ಸಂಭ್ರಮದಿ
ಕಾದಿಹರು ನಿನ್ನಯ ಜಲದಿ
ಕಾವೇರಿ ಮಾತೆ ದಯೆ ತೋರಮ್ಮ ||೩||

ಸಿಡಿಲು
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೧೩/೧೦/೨೦೧೭



Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ