ಮುಗಿಲ ಮೌನ
ಮುಗಿಲ ಮೌನ
~~~~~~~~~
ಕತ್ತಲ ರಾತ್ರಿಯ ಅಗಾಧ ಮೌನ
ಅವನಿಲ್ಲದ ನೆನಪುಗಳ ಗಾನ.
ಚಳಿಯ ಬಳುವಳಿ ಹೇಳಲೇನ
ಕಂಬಳಿಯೇ ಹೇಳಿದೆ ಗಾಯನ
ನಿನ್ನ ಬಿಟ್ಟಿರಲಾರೆನು ನಾ
ಮುಂಜಾನೆಯ ಮಂಜಿನಲಿ
ನಡಿಗೆ ಸುತ್ತಿದಾ ಮಫ್ಲರ್ ಮಂಕಿ
ಟೋಪಿಯ ಸಂದಿಯಲಿ ಉಸಿರ
ಮೊರೆತದ ಹೊರತು ಬರೀ ಮೌನ
ದೂರದಿ ಎಲ್ಲೋ ಶ್ವಾನ ಗಾಯನ
ಮುಂಜಾನೆಯ ನಡಿಗೆಯ ಹೆಜ್ಜೆ
ಸಪ್ಪಳ ಹಕ್ಕಿಗಳಿಂಚರ ಹರಿದಾಡುವ
ವಾಹನ ಮೊರೆತ ಮರೆತ ಭಾವಲಹರಿಗೆ
ಮನ ನುಗ್ಗುವ ತುಡಿತ ಇವಾವುದಕ್ಕೂ
ಸ್ಪಂದಿಸದ ನೊಂದು ಬೆಂದ ಮನ ಮೌನ
ಸಂತೆಯಲಿ ನಿಂತ ಸಂತ
ತನ್ನ ಸುತ್ತ ಇರಲಿಲ್ಲವನ ಚಿತ್ತ
ಚಿತ್ತ ದೈವ ನಾಮ ಸ್ಮರಣೆಯತ್ತ
ಸಂತೆಯಲ್ಲಿದ್ದರೂ ಪಕೀರನ ಮನ
ಪರಕೀಯ ಪರಮ ಮೌನ.
ಮುಂಗಾರಿಗೂ ಮುನ್ನ ಮುಗಿಲ
ಗುಡುಗು ಮಿಂಚಿನ ಆರ್ಭಟ
ಮುಗಿಲ ಆರ್ಭಟಕ್ಕೆ ಬೆದರಿ
ಸೂರ್ಯನ ತಾತ್ಕಾಲಿಕ ಮೌನ
ಮೋಡ ಚದುರಿದ ಬಳಿಕ
ಮುಗಿಲ ದಿವ್ಯ ಮೌನ
ಮಳೆಗಾಲದಿ ಅದಿತ್ಯನ
ಅಸಹನೀಯ ಮೌನ
ವೈಲೇಶ ಪಿ ಯೆಸ್ ಕೊಡಗು
21/2/2017
Comments
Post a Comment