ಮೊಣಕೈ ತಬ್ಬಿದವರು
ಮೊಣಕೈ ತಬ್ಬಿದವರು
~~~~~~~~~~~
ಎಲ್ಲಿಂದಲೋ ಪಯಣ ಬಂದವರು
ಮತ್ತೆ ಎತ್ತಲೋ ಹೊರಟು ಕಾಯ್ವರು
ಮಧ್ಯೆ ಮಲಗಿ ನಿದ್ರಿಸುತ್ತಿರುವವರು
ಮನೆ ಮಠ ಇಲ್ಲದವರೂ, ಸಕಲವೂ
ಇದ್ದು ಬೆಳಸಿ ಬಳಸಿಕೊಳ್ಳಲಾರದವರು
ತುತ್ತು ತುಂಬಲು ಕರುಳು ಹೊತ್ತವರು
ನಿತ್ಯ ತುತ್ತಿಗೆ ಬೆವರು ಸುರಿಸಿದವರು
ಹೊತ್ತು ಹೆತ್ತವರ ಒದ್ದು ಬಂದವರು
ಸತ್ಯ ಕುಡಿತಕೆ ಬಾಳು ಬಲಿ ಹಾಕಿದವರು
ಇರುಳರಳುವ ನಶೆಗೆ ಸೆರೆಯಾದವರು
ಗಂಡು ಹೆಣ್ಣೆಂಬ ಬೇದ ಅರಿತವರು
ಕಾಮ ಮೋಹವ ಸವಿದು ನಿಂತವರು
ಒಂದೇ ಕಾಗದದಿ ತಲೆಯ ಇಟ್ಟವರು
ತಲೆದಿಂಬೆಂದು ಮೊಣಕೈ ತಬ್ಬಿದವರು
ಸುಖ ದುಃಖವ ಮರೆತು ನಿದ್ರಿಸಿದವರು
ಪ್ರೇಮದ ನೇಮದಲಿ ಹೋಮವಾದವರು
ಪ್ರೀತಿಯ ರೀತಿಯಲಿ ಸೋತು ಸತ್ತವರು
ಸಂತಾನ ಮೋಹಕೆ ಬಲಿ ಹೋದವರು
ಸಂಸಾರ ಸಂತೆಯಲಿ ಬತ್ತಲಾದವರು
ರಾತ್ರಿಯ ರೌರವ ನಿಲ್ದಾಣದಿ ಕಳೆವವರು
ವೈಲೇಶ ಪಿ ಯೆಸ್ ಕೊಡಗು
೨೩/೨/೨೦೧೮
Comments
Post a Comment