ಹಬ್ಬ

ಹಬ್ಬ
=======
ವರುಷಕ್ಕೊಮ್ಮೆ ಬರುವ ಹಬ್ಬ
ಶಿವನ ಭಕ್ತಿಯಿಂದ ಪೂಜಿಸುವ ಹಬ್ಬ
ವರ್ಷಾದ್ಯಂತ ನಮ್ಮ ಕಾಯ್ದು ವಿರಾಮಕ್ಕಾಗಿ
ಮಲಗಿದ ಶಿವನನ್ನು ನಾವು ಕಾಯುವ ಹಬ್ಬ
ಜಾಗರಣೆ ನೆಪದಿ ಪುಂಡಾಟದ ಹಬ್ಬ ಮತ್ತೆ
ಜೂಜುಕೋರರ ಸೋಲು ಗೆಲುವಿನ ಹಬ್ಬ

ಶಿವಭಕ್ತರಿಗೆ ನೆಚ್ಚಿನ ಹಬ್ಬ
ದೇವಳದ ಅರ್ಚಕರಿಗೆ ಕೈಂಕರ್ಯದ ಹಬ್ಬ
ದೇಗುಲ ಮುಂಬಾಗ ಬಿಕ್ಷುಕರಿಗೂ ಹಬ್ಬ
ಜಿನಸಿ ಬಟ್ಟೆ ಹೂವು ಹಣ್ಣು ಸಿಹಿ ತಿಂಡಿ
ಪೂಜಾಸಾಮಾಗ್ರಿ ವ್ಯಾಪಾರಿಗೂ ಹಬ್ಬ

ತಪಜಪವೆಂಬ ವೃದ್ದರಿಗೂ ಹಬ್ಬ
ಯಜಮಾನರ ಕಿಸೆಗೆ ಕತ್ತರಿಯ ಹಬ್ಬ
ಹೆಂಗೆಳೆಯರಿಗೆ ಬಗೆಬಗೆಯ ತಿಂಡಿ
ತಯಾರಿಸಿ ಬಂದವರಿಗೆ ಕೈ ರುಚಿ
ತೋರಿಸಿ ಸಂಭ್ರಮಿಸುವ ಹಬ್ಬ
ಯುವಕರಿಕೆ ಅತ್ತಿತ್ತ ಅಡ್ಡಾಡೋ ಹಬ್ಬ

ಎಳೆಯರಿಗೆ ವೇಷಧಾರಿಗಳಾಗುವ ಹಬ್ಬ
ಊರವರಿಗೆ ವೇಷಧಾರಿ ವೀಕ್ಷಿಸುವ ಹಬ್ಬ 
ಶಿವನಿಗೆ ನಿದ್ರಿಸುವ ಖ್ಯಾತಿಯ ಹಬ್ಬ
ಪುಂಡರಿಗೆ ತಂಟೆ ಮಾಡುವ ಅವಕಾಶದ ಹಬ್ಬ
ಜ್ಞಾನಿಗಳಿಗೆ ದೈವಭಕ್ತಿಯ ಹಬ್ಬ  

ಹಬ್ಬ ಅಂದರೆ ಹಬ್ಬ ಅಬ್ಬಬ್ಬ
ಶಿವರಾತ್ರಿಯ ಜಾಗರಣೆ ಹಬ್ಬ
ಚಿಕ್ಕಂದಿನ ಅಮಾಯಕತೆಯ ಹಬ್ಬ
ಮಕ್ಕಳೆಲ್ಲ ಸೇರಿ ಬಿಕ್ಷೆ ಬೇಡುವ ಹಬ್ಬ
ಬೇಡಿ ತಂದ ಅಕ್ಕಿಯನ್ನು ಪಾಯಸ 
ಮಾಡಿ ಉಂಡು ಹಣ ಹಂಚಿಕೊಳ್ಳುವ ಹಬ್ಬ 

ಭರತ ಖಂಡದ ಸರ್ವ ಜಾತಿಗೂ ಒಂದೊಂದು ಹಬ್ಬ
ಕೊಡವರಿಗೆ ಕೆಲವು ವಿಶೇಷ ಹಬ್ಬ
ಬಡವರಿಗೆ ಉಣಲು ಉಡಲು ಸಿಕ್ಕಿದರೆ ಹಬ್ಬ
ಕ್ರೈಸ್ತರಿಗೆ ಶುಭ ಶುಕ್ರವಾರ ಶೋಕದ ಹಬ್ಬ
ಮುಸಲ್ಮಾನರಿಗೆ ಉಪವಾಸವಾದರೂ ರಂಜಾನ್ ದೊಡ್ಡ ಹಬ್ಬ ಹಣವಿದ್ದವರಿಗೆ ನಿತ್ಯವೂ ಹಬ್ಬ

ಹಣದ ಹುಚ್ಚು ಹೆಚ್ಚಾಗಿ ಜೈಲುವಾಸದ ಹಬ್ಬ
ನಮ್ಮ ನಿಮ್ಮಂತಹ ಓದುಗ ಬರಹಗಾರರಿಗೆ 
ಎಲ್ಲ ಹಬ್ಬಗಳ ಕಂಡು ಕೇಳಿ ತಲೆಗೆ ತುಂಬುವ ಹಬ್ಬ 

ಹಿಂದೂಸ್ತಾನದ ಜನರಿಗೆ ಅದರಲ್ಲೂ ಹಿಂದು ವರ್ಷವಿಡಿ ಸಾವಿರ ಹಬ್ಬ ದುಡಿದ ಹಣ ಸಾಲದೇ ಸಾಲ ಮಾಡಿಯಾದರೂ ಹಬ್ಬ ಮಾಡುವ ಹಬ್ಬ
ಅಷ್ಪಿಲ್ಲದೇ ಗಾದೆ ಇದೆಯಾ ಸಾಲ ಮಾಡಿಯಾದ್ರು ತುಪ್ಪ ತಿನ್ನು ಎಂದು. ಸಾಲ ನೀಡಿ ಬಡ್ಡಿಯಲ್ಲೇ ಹಬ್ಬ ಮಾಡುವವರಿಗೂ ಶಿವನ ಕೊಡುಗೆ ಶಿವರಾತ್ರಿ ಹಬ್ಬ

ವೈಲೇಶ ಪಿ ಯೆಸ್ ಕೊಡಗು
23/2/2017

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ