ಅಯ್ಯೋ ಜೀವನವೇ
ಅಯ್ಯೋ ಜೀವನವೇ
~~~~~~~~~~~
ಬಾಳು ಸುಬಾಳಗಿದ್ದ ಸಮಯವದು
ಕುಟುಂಬದಿ ಕಿರಿ ಸೊಸೆ ನಾನಂದು
ಮಕ್ಕಳು ಮರಿಯಾದಿ ಹಿಂದು ಮುಂದು
ನನ್ನವರೋ ಜೊತೆ ಬಿಡದೇ ಎಂದೆಂದೂ
ತಿರುಗುತ್ತಿದ್ದರು ಹೂಮುಡಿದ ಜಡೆ ಹಿಡಿದು.
ಕಲಿತ ಮಕ್ಕಳು ಕಾಂಕ್ರೀಟ್ ಕಾಡು ಸೇರಿದವು
ನಾ ಕಲಿಸದ ಕೂಸೊಂದು ಬೇಸಾಯ ಬಳಿದು
ಪರಂಪರೆ ಉಳಿಸಿ ಸಂಸಾರ ಚುಕ್ಕಾಣಿ ಹಿಡಿದು
ನಡೆದಿಹುದು ಎಲ್ಲರ ಮನ ಗೆಲುವಂತೆ ನಡೆದು ಅಂದಿಗೂ ಇಂದಿಗೂ ಕೈ ಬಿಡದಂತೆ ಬಸವಳಿದು
ಕೈ ಬಿಡೆನೆಂದು ನುಡಿದಿನಿಯ ನಡು ನೀರಲ್ಲಿ ಹಠಾತ್ತನೇ ಎದ್ದು ನಡೆದು ಮಕ್ಕಳು ಮರಿಗಳ
ಮಡಿಲಿಗೆ ಎಸೆದ ಅಂದು ನಾನಂದುಕೊಂಡೆರೆ
ಮಕ್ಕಳ ಮನದಲ್ಲಿ ನಾನಾಗಲೇ ಮುದುಕಿಯಾಗಿದ್ದೆ.
ಮಸಣದಿಂದ ನೇರ ಕಾಂಕ್ರೀಟ್ ಕಾಡಿನತ್ತ ಐವರು ಮಕ್ಕಳ ಪಯಣ. ಕೆಲವು ದಿನಗಳಲ್ಲಿ ಸಿರಿತವರು
ಮನೆಯವರು ದೂರ ದೂರ ಇದ್ದೊಬ್ಬ ಮನೆ ಮಗ
ಸೊಸೆ ಮೊಮ್ಮಕ್ಕಳು ಎತ್ತಿಳಿಸಿ ಆರೋಗ್ಯ ಪುನರ್ ಪ್ರಾಪ್ತಿ ಆದರೂ ಇಂಗಲಿಲ್ಲ ಜೀವನದ ಪ್ರೀತಿ
ಕೈಕಾಲು ನಡುಗಿ ಉಸಿರು ನಿಲ್ಲುವ ವೇಳೆ
ಪಟ್ಟಣದ ಮಕ್ಕಳೆಂದರು ಬರುವೆವು ನಾಳೆ
ನಿಜ ಕರುಳಿನ ಕಂದನ ಹಿಡಿದ ನನ್ನ ಕೈ ಯಾಕೋ
ಸಡಿಲು ಸಡಿಲು ನಾ ಬೇಗ ಸೇರುವೆ ಭೂತಾಯ ಮಡಿಲು ಪುನರಪಿ ಜನನ ಮೊಮ್ಮಗಳ ಮಡಿಲು.
ವೈಲೇಶ ಪಿ ಯೆಸ್ ಕೊಡಗು
27/02/2017
Comments
Post a Comment