ಆಳ್ವಾಸ್
ದಿನಾಂಕ ೨೪/೨/೨೦೧೮ ಶನಿವಾರದಂದು ಅಳ್ವಾಸ್ ನುಡಿಸಿರಿ ಕೊಡಗು ಘಟಕ . ಇವರ ವತಿಯಿಂದ ನಡೆದ ನೂತನ ಘಟಕದ ಉದ್ಘಾಟನೆ ಹಾಗೂ ಅಂತರರಾಷ್ಟ್ರೀಯ ಆಳ್ವಾಸ್ ಸಾಂಸ್ಕೃತಿಕ ವೈಭವ ನಿಯೋಜಿತ ಕಾರ್ಯಕ್ರಮ ಆರಂಭವಾದಾಗ ಸುಮಾರು ಒಂದು ಗಂಟೆಗಳ ಕಾಲ ತಡವಾಯಿತು ನಿಜ. ಸುಮಾರು ಮುನ್ನೂರ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೇಲ್ವಿಚಾರಕರ ತಂಡ ಸಮಯಕ್ಕೆ ಸರಿಯಾಗಿ ಆಗಮಿಸಿದ್ದರು. ಡಾ|| ಕೆ.ಕೆ ಶಿವಪ್ಪ ಗೋಣಿಕೊಪ್ಪಲು ಇವರ ಕೊಡವ ಭಕ್ತಿಗೀತೆಯ ಬಳಿಕ ಔಪಚಾರಿಕ ಸಭಾ ಕಾರ್ಯಕ್ರಮ ಮುಗಿದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಂಡವು.
ಮೊದಲಿಗೆ ಕೊಡಗಿನ ಕವಯತ್ರಿ ಮುಲ್ಲೆಂಗಡ ರೇವತಿ ಪೂವಯ್ಯನವರು ರಚಿಸಿದ ಕೊಡವ ಭಕ್ತಿಗೀತೆಗೆ ತಕ್ಕ ಉಮ್ಮತ್ತಾಟ್ ನೃತ್ಯದ ಮೂಲಕ ಆರಂಭವಾಯಿತು. ಬಳಿಕ
ಕೇರಳದ ಶಾಸ್ತ್ರೀಯ ನೃತ್ಯ ಮೋಹಿನಿಯಾಟ್ಟಂ
ಬಡಗುತಿಟ್ಟು ಯಕ್ಷ ಪ್ರಯೋಗ (ರಾಮಪಟ್ಟಭೀಷೇಕ)
ಒರಿಸ್ಸದ ಜನಪದ ನೃತ್ಯ (ಗೋಟಿ ಪೂವ)
ಶ್ರೀ ಲಂಕದ ಕ್ಯಾಂದಿಯನ್ ಸಮೂಹ ನೃತ್ಯ
ಆಂದ್ರದ ಬಂಜಾರ
ಮಣಿಪುರದ ಸ್ಟಿಕ್ ಡ್ಯಾನ್ಸ್
ಭರತ ನಾಟ್ಯ (ಭೂ ಶಂಭು)
ಸಾಹಸಮಯ ಮಲ್ಲ ಕಂಬ
ಗುಜರಾತಿನ ಧಾಂಢಿಯಾ ನೃತ್ಯ
ಪಶ್ಚಿಮ ಬಂಗಾಳದ ಸಿಂಹ ಬೇಟೆ ( ಪುರುಳಿಯೋ)
ಮಹಾರಾಷ್ಟ್ರದ ಲಾವಣಿ ನೃತ್ಯ
ತೆಂಕುತಿಟ್ಟು ಯಕ್ಷಗಾನ (ಆಗ್ರ ಪೂಜೆ)
ವಂದೇ ಮಾತರಂ ನೃತ್ಯ ರೂಪಕವನ್ನು
ಆಯಾ ಭಾಷೆಯ ಗೀತ ಸಂಗೀತ ತಾಳ ಮೇಳ ಉಡುಪು ವಿನ್ಯಾಸದೊಂದಿಗೆ ಮಾಯಾಲೋಕಕ್ಕೆ ಕರೆದೊಯ್ಯುವ ಪ್ರಯತ್ನವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ತಂಡವು ನಡೆಸಿಕೊಟ್ಟಿತು.
ನಿಜವಾಗಿಯೂ ಕಾರ್ಯಕ್ರಮ ಹೇಗಿತ್ತೆಂದರೆ ನಾವೆಲ್ಲರೂ ಒಂದು ಕಾರ್ಯಕ್ರಮ ಹೇಗಿರಬೇಕು ಎಂದು ಬಯಸುತ್ತೇವೆಯೋ ಹಾಗೆಯೇ ಇತ್ತು.
ಕಾರ್ಯಕ್ರಮ ಪ್ರಾರಂಭವಾದ ಕ್ಷಣದಿಂದ ಕೊನೆಯ ಕ್ಷಣದವರೆಗೂ ಎಲ್ಲಿಯೂ ಒಂದೇ ಒಂದು ಕ್ಷಣವನ್ನು ಹಾಳು ಮಾಡದೇ ತುಂಬಾ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಯಾವುದೇ ಒಂದು ರಾಜ್ಯ ಭಾಷೆ ಗಡಿ ಸ್ವಾರ್ಥ ಚಿಂತನೆಯನ್ನು ಮೀರಿ ಕೇವಲ ಕೇವಲ. ಮತ್ತೊಮ್ಮೆ ಹೇಳುವೆ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗಷ್ಟೇ ಪ್ರಾಶಸ್ತ್ಯ ಕೊಟ್ಟ ಕಾರ್ಯಕ್ರಮ ಇದು. ಇದಕ್ಕಿಂತ ಉತ್ತಮ ಕಾರ್ಯಕ್ರಮವನ್ನು ನಾನೆಲ್ಲೂ ಕಂಡಿಲ್ಲ. ಕಾರ್ಯಕ್ರಮ ನಿರ್ವಹಣೆಯಲ್ಲಿ ಸಮರ್ಥ ಕನ್ನಡಿಗರು ಇದೇ ದಾರಿಯಲ್ಲಿ ಸಾಗುತಿದ್ದಾರೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ.
ಒಟ್ಟಾರೆ ಹೇಳುವುದಾದರೆ ಕೊಡಗಿನಲ್ಲಿ ನಡೆದ ಒಂದು ಅತ್ಯುತ್ತಮ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ನಾವೆಲ್ಲರೂ ಇದ್ದೆವು ಎಂಬುದು ಸಂತಸದ ಸಂಗತಿ
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿಯೊಬ್ಬ ಸಾಂಸ್ಕೃತಿಕ ಸಾಹಿತ್ಯ ಚಿಂತಕರ ಜೊತೆಗೆ ನಾವು ಕೂಡ ಕೈಗೆ ಕೈ ಬೆಸೆಯುವ ಎಂಬ ಆಶಯ ಗೆಳೆಯರೇ
ನಮಸ್ಕಾರ
ನಾನೆಂದು ನಿಮ್ಮವನೇ
ವೈಲೇಶ ಪಿ ಯೆಸ್ ಕೊಡಗು
೯೪೮೧೮೮೩೧೯೪ :೨೫/೨/೨೦೧೮
Comments
Post a Comment