ವಚನ ೨೯ ರಿಂದ ೩೧

ವಚನ : ೨೯
========

ಕೆಂಡಗಣ್ಣಿನ ಪುಂಡರ ನುಡಿಯಾಲಿಸಿ
ಕಂಡವರ ಕೂಳಿನಲಿ ಕೆಂಡವನ್ನುಗುಳುವರಯ್ಯ
ತಾನೇನೂ ತಿರಿದು ತಂದು ನೀಡಿ
ಬಳಿದು ಬಡಿಸಲಸಾಧ್ಯವಾದರೂ
ಕಂಡವರೀದ ಕೂಳಿನಲಿ ಕಲ್ಲು ಮಣ್ಣಿನ
ಮಳೆಗರೆವರಾ ಕಂಡು ಕೆಂಡಮಂಡಲವಾದ
ಹರಿಹರ ಶ್ರೀ ಬ್ರಹ್ಮಲಿಂಗೇಶ್ವರ

ವಚನ : ೩೦
===%=%==

ಬೆಳೆಯುವವನಾರೋ ಬೆಳೆಸುವವನಾರೋ
ಈಯುವವನಾರೋ ಪಡೆಯುವವನಾರೋ
ಏನ ಮಾಡಲರಿಯದೇ ಹಾಳು ಮಾಡುವಿರೇಕಯ್ಯ
ಬಿತ್ತಿ ಬೆಳೆದವನಿಗಲ್ಲದೇ ಅಹಂಕಾರ ಮದದಿಂದ ಬರಿದೇ ಬಿಸುಟವನಿಗೆ ಬಲ್ಲುದೇ ಅನ್ನದ ಬೆಲೆ
ಮುಂದೊಂದು ದಿನ ನೀನರಿವೆ ಅನ್ನದಾ ಬೆಲೆಯೆಂದ
ಹರಿಹರ ಶ್ರೀ ಬ್ರಹ್ಮಲಿಂಗೇಶ್ವರ.

ವಚನ : ೩೧
÷÷÷÷÷÷÷÷

ಅಹಂಕಾರದಿ ಅರಿತರಿತು ಉಂಬ ಅನ್ನವನ್ನೆಸೆಯದಿರಿ ಇಂದೆಸದ ಅನ್ದದಗುಳನು
ಮುಂದೆ ನೆನೆಯುವ ಕಾಲ ದೂರವಿಲ್ಲವಯ್ಯ.
ಇಳೆಯ ಬೆಳೆಯ ಅನ್ನದ ಋಣ ತೀರಿದೊಡೆ
ಹಿಂದೆಸೆದ ಅನ್ನದಗುಳುಗಳು ಅಣಕಿಸಿ ನಗವವು
ಸ್ವಯಂಕೃತಾಪರಾದವಿದು ಅರಿತು ನಡೆಯೆಂದ ಹರಿಹರ ಶ್ರೀ ಬ್ರಹ್ಮಲಿಂಗೇಶ್ವರ

ವೈಲೇಶ ಪಿ ಯೆಸ್ ಕೊಡಗು
1/3/2017

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ