ಅದೊಂದು ಅಪರೂಪದ ಅಪೂರ್ವ ಅನುಭವ. ಇಲ್ಲಿಯವರೆಗೆ ಕೇವಲ ನಾಲ್ಕು ಜನ ಕುಳಿತು ಮಾಡುವ ಕವಿಗೋಷ್ಟಿಯಿಂದ ಮೊದಲ್ಗೊಂಡು ಜಿಲ್ಲಾ ಮಟ್ಟದ ರಾಜ್ಯ ಮಟ್ಟದ ರಾಷ್ಟ್ರ ಮಟ್ಟದ ಕವಿಗೋಷ್ಟಿಯಲ್ಲಿ ಭಾಗವಹಿಸಿದ ಅನುಭವ ಮಾತ್ರ ಇತ್ತು. ಆದರೆ ದಿನಾಂಕ ೧೪/೪/೨೦೧೮ರಿಂದ ೧೫/೪/೨೦೧೮ ರವರೆಗೆ ನಮ್ಮ ಬಳಗ ಅಂದರೆ #ಸಮರ್ಥ_ಕನ್ನಡಿಗರು ವತಿಯಿಂದ ನಡೆದ #ವಿಶ್ವ_ಕನ್ನಡ_ಕಾವ್ಯ_ಕಮ್ಮಟದ ಅನುಭವ ನಿಜವಾಗಿಯೂ ಅದೊಂದು ಅವಿಸ್ಮರಣೀಯ ಅನುಭವ ಎನ್ನಬಹುದು ಅದರ ಉದ್ಘಾಟನೆಗೆಂದೇ ಸೈಕಲ್ ಕವಿ ಎಂದೇ ನಾಮಾಂಕಿತರಾದ ಸುಮಾರು ೪೦೦೦೦ ಕವಿತೆಗಳನ್ನು ಬರೆದು ಬರೆದು ಸುಮಾರು ೨೦೦೦೦ ಹಾಡುಗಳಾಗಿ ಪರಿವರ್ತನೆ ಹೊಂದಿ ನಲ್ವತೈದಕ್ಕೂ ಹೆಚ್ಚು ಪುಸ್ತಕ ಪ್ರಕಟಿಸಿದವರು ೧೧ನೇ ದಾರವಾಡ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಕರಾಗಿದ್ದ ಡಾ|| ವಿ ಸಿ ಐರಸಂಗ ಇವರು ಆಗಮಿಸಿದ್ದರು. ಬಾಗಲಕೋಟೆ ಜಿಲ್ಲೆಯ ಸಿದ್ದಪ್ಪ ಸಾಬಣ್ಣ ಬಿದರಿ ಇವರು ಅಶು ಕವಿಗಳು ಶಾಲೆಯ ಮೆಟ್ಟಿಲು ಹತ್ತದ ಕೇವಲ ಸಹಿ ಮಾಡುವಷ್ಟು ಅಕ್ಷರ ಕಲಿತಿರುವ ಇವರು ಪಟಪಟನೆ ಅರಳು ಹುರಿದಂತೆ ಕವನಗಳನ್ನು ಹಾಡುಗಳನ್ನು ಹೇಳುವ ರೀತಿಗೆ ನಿಬ್ಬೆರಗಾಗದವರಿಲ್ಲ. ಮಹಂತಪ್ಪ ಮೇಟಿಗೌಡ ಅಮರಾವತಿ ಹಾಗೂ ಪದ್ಮಶ್ರೀ ಪ್ರಶಸ್ತಿ ವಿಜೇತ ಡಾ| ದೊಡ್ಡರಂಗೇಗೌಡರು ಇಂತಹ ವ್ಯಕ್ತಿಗಳ ಸಾಂಗತ್ಯ. ತನ್ನ ಮಾತೃಭಾಷೆ ಬೇರೇಯೇ ಆದರೂ ಅತ್ಯಂತ ಸ್ಪುಟವಾಗಿ ಕನ್ನಡದ ಹಾಡುಗಳನ್ನು ಹಾಡುವ ಕಾಸರಗೋಡಿನ ಮಿತ್ರ ಮಹಮ್ಮದ್ ನೌಷಾದ್ ಮ...