ರೋಮಾಂಚನ
ರೋಮಾಂಚನ
~~~~~~~~
ದೂರ ತೀರವ ದಾಟಿ ಬಂದಿಹೆನು
ಯಾರ ಹಂಗನು ಮೀರಿ ನಿಂದಿಹೆನು
ಮೇಲಿರುವ ತಾ ಕಾಣದ ಅಂಬಿಗನು
ಕಷ್ಟ ಸುಖವನೆದುರಿಸುವ ಛಲದಿಹೆನು
ಆಗಸದ ತುಂಬೆಲ್ಲ ತಾರೆಗಳ ತೋಟ
ಶರಧಿಯ ಒಡಲೆಲ್ಲ ಜಲಚರಗಳಾಟ
ಅಕ್ಷಿಗದು ನಿಲುಕದ ಜಲದಾಳ ನೋಟ
ಬದುಕೆ ಹೀಗೆ ಅಂವ ಬರೆದುಕೊಟ್ಟಾಟ
ಹರುಷವುಕ್ಕಿದೆ ಏಕಾಂತದೀ ಜೀವನಕೆ
ಕುಳಿರ್ಗಾಳಿಗೆ ರೋಮಾಂಚನ ಮೈಮನಕೆ
ಅದೆಷ್ಟೋ ರಾತ್ರಿಗಳ ಬಯಕೆಯಿದು ಪುಳಕಕೆ
ತುಂತುರು ನೀರಹನಿಯು ಸಿಡಿದಿದೆ ಜಳಕಕೆ
ನೀರವ ರಾತ್ರಿಯಲಿ ಮಾಧವನ ಬಯಕೆ
ಅದೇನೋ ಎಂದಿಲ್ಲದ ವಿರಹಾಗ್ನಿ ಇದೇಕೆ
ಏನಾದರಾಗಲಿ ಮನ್ನಿಸು ಎನ್ನ ಮನದಾಸೆ
ನೀನಿಲ್ಲದೇ ನಾನಿಲ್ಲವೆಂಬುದೇ ಮೀಮಾಂಸೆ
*ವೈಲೇಶ ಪಿ ಯೆಸ್ ಕೊಡಗು*
*೩/೪/೨೦೧೮*
Comments
Post a Comment