ಹೆಣ್ಣಲ್ವಾ

ಹೆಣ್ಣಲ್ವಾ!
~~~~~
ಹುಟ್ಟಿದ್ ಮನೆ ಬುಟ್ಟು ಅಪ್ಪ ಅಮ್ಮ
ಅಕ್ಕ ತಂಗೇರು ಗೆಳ್ಯ ಗೆಳ್ತಿ  ಅಣ್ಣ ತಮ್ಮ
ಊರು ಕೇರಿ ನಲ್ಲಿ ಬಾವಿ ಕೆರೆ ಕೊಳ್ಳ
ಎಲ್ಲಾ ಒತ್ತಟ್ಟಿಗಿರಿಸಿ ನಡ್ದೇ ಬುಟ್ಳಲ್ಲಾ
ಅದ್ಕೇಯ ಯೋಳೋದು ಹೆಣ್ಣಲ್ವಾ 

ಒಪ್ಮಾತ್ ಆಗಿ ಲಗ್ಣಾ ಮುಗ್ದು ಎತ್ಗಾಡಿ
ಏರೋ ಹೊತ್ಗೆ ಅತ್ತು ಕರ್ದು ಕಣ್ಣೂದ್ಕಂಡು
ಮರ್ತೇ ಬುಟ್ಳು ಗಂಡನ್ ಜತೆ ಕೂತ್ಕಂಡು
ನಗ್ ನಗ್ತಾ ಜೀವ್ನದ್ ಕನಸು‌ ಕಂಡ್ಕೊಂಡು
ಲೋಕನೇ ಮರೆಯೋ ಹಂಗೆ ಮಾತಾಡ್ಕೊಂಡು 

ಮುಂದಾರ್ ವರ್ಷ ಎರಡ್ಮಕ್ಳ ಎತ್ಗೊಂಡು
ಗಂಡನ್ ಮಗ್ಗ್'ಲಾಗೆ ನಿಂತ್ಕೊಂಡು
ಹುಟ್ಟಿದ್ ಮನೆ ಮಠ ಕಣ್ಣಿಗ್ ತುಂಬ್ಕೊಂಡು
ನನ್ ತವ್ರು ಘನ್ ವಾಗ್ಲಿ ಅಂತಂದು ಗಂಡನ್
ಮನ್ಗೆ ನಡದ್ಳು ಅದೇ ಸಾಸ್ವತಂತ ನಂಬ್ಕೊಂಡು

ಎಲ್ಲೋ ಉಟ್ಟಿ ಎಲ್ಲೋ ಬೆಳ್ದು ಬೆಳ್ಳಕ್ಕಿ ಅಂಗೆ
ಬ್ಯಾರೆ ಕಡೆ ಹಾರಿ ಅಲ್ಲೊಂದ್ ಗೂಡ್ ಕಟ್ಟಿ
ಅತ್ತೆ ಮಾವ ಮಕ್ಳು ಮರಿ ಅಂತಾವ ಉಟ್ಟಿದ್ ಹಟ್ಟಿ
ಮರಿನಾರ್ದೇ ಅಲ್ಲೊಸಿ ಕೊರ್ಗು ಇಲ್ಲೊಸಿ ಬೆರ್ಗು
ಅಂತೂ ಮೊಗ ಬಾಳ್ಮೆ ಮಾಡಿದ್ಳು ಕೊನೇವರ್ಗು

ವೈಲೇಶ ಪಿ ಯೆಸ್ ಕೊಡಗು
೨೬/೬/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು