ಸ್ಪರ್ಧೆಗಾಗಿ ಕ್ಷಣದ ಅಡ್ಡೆ

ಚಿತ್ರ ಕವನ ಸ್ಪರ್ಧೆಗಾಗಿ
ಕ್ಷಣದ ಅಡ್ಡೆ
~~~~~~
ನೇಸರನ ಬಿಸಿಯುಸಿರಿಗೆ ಬೆವತು
ಶರಧಿಯ ಸರಹದ್ದನು ಮರೆತು
ನೀಲಗಗನಕೆ ನಡೆದೆವು ಸೋತು
ನಾವಿಬ್ಬರೂ ಅಗಲಿದಂತಾಯ್ತು

ಗುರುತ್ವಾಕರ್ಷಣೆಯ ಮೀರಿ
ನಿರ್ಭಾರದ ನಿಜ ಸ್ಥಿತಿಯನೇರಿ
ತಂಪು ಸಂಪಿಗೆ ಕ್ಷಣ ಅಡ್ಡೆ ಕಣ್ರೀ
ನೀಲ ಬಾನಿಗೆ ಸೋಲು ಅಡರಿ

ರವಿಯ ಕಿರಣಕೆ ಹರಣ. ತರಣಿ
ಇಳಿವ ತನಕೆ ಕರುಣಾಳು ಧರಣಿ 
ಕಣ್ಣು ಕುಕ್ಕುವ ಬಣ್ಣವ ಈದಿತು
ಕೆಲ ಘಳಿಗೆಗೆ ಕರಿ ಮೋಡ ಹೇತು

ಕರಿಬಾನು ಸರಿದು ಮಿಂಚು ಸುಳಿದು
ಗುಡುಗ ನಡುಗಿಗೆ ಬುವಿಗೆ ಇಳಿದು
ನಾಗ ರೂಪದಿ ನದಿ ತೆವಳಿ ಕಡಲು
ಬೆರೆತು ಬೆರೆಯಬೇಕು ಹಗಲಿರುಳು

ವೈಲೇಶ ಪಿ ಯೆಸ್ ಕೊಡಗು
೧೦/೪/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು