ಗಂಡ್ ಬತ್ತೂ

ಗಂಡ್ ಬತ್ತೂ
~~~~~~~~
ತಿಂಗ್ಳ್ ಹಿಂದೆ ತಂಗ್ಳ್ ಉಣ್ಣೊ ಹೊತ್ಗೆ
ಮೂರಾಳ್ ಜೊತೆಗ್ ಬಂದ್ರಲ್ಲಾ ಮೆತ್ಗೆ
ಇರೋದ್ ಒಂದೇ ಬಾಗ್ಲು ಮನೆಗೆ ಅವ್ವಿಲ್ಲ
ಅವ್' ನಂತ ವಿಶಾಲಕ್ಕ ಮಗ್ಗಲ್ ಮನೆಯಾಗ್
ಅವ್ಳೆ. ಹಕ್ಳ್ ಮಾತ್ಗೆ ಬಂದ್ ಅಂದ್ಳು ಯಾಕ್ಲೇ

ಯಕ್ಕೋ ನನ್ ನೋಡಕ್ ಬಂದವ್ರೆ
ಒಳ್ಳೆ ಸೀರೆ ತತ್ತಾ ಮತ್ತೆ ಚೆನ್ನಾಗಿರೋದಿದ್ರೆ
ಸೀರೆ ಜತ್ಗೆ ಅಚ್ಚ್ ಬೆಲ್ಲ ಟೀ ಪುಡೀನೂ
ತಂದ್ಳಪ್ಪಾ ಅದ್ಕೆಯಾ ನಾನನ್ನೋದು ನಮ್
ಇಶಾಲಕ್ಕ ಅಂದ್ರೆ ದ್ಯಾವತೆ ಅಂತಾವ

ಟೀ ಕಾಸ್ತಾ ಸ್ಯಾಲೆ ಉಟ್'ಕೊಳೋ ಹೊತ್ಗೆ
ಅಕ್ಕನ್ ಮಗ ಬಿಸ್ಕತ್ತ್ ಪಟ್ಣ ತಂದಿಟ್ಟ
ಕೈಕಾಲ್ ನಡುಗ್ತಾ ಅವ್ವನ್ ಬಯ್ಕೋತ
ಟೀ ಕೊಡಾಕ್ ಹೋದ್ರೆ ತಲೆ ಎತ್ನಿಲ್ಲ
ಗಂಡು ಚೆನ್ನಾಗೈತಾ ಅಂತಾನು ನೋಡ್ನಿಲ್ಲ 

ಒಳೀಕ್ ಬಂದ್ರೇ ಕಿಟ್ಕೀ ಸಂದಿಗಣೆ
ನನ್ ಗೆಳ್ತಿರೆಲ್ಲಾ ಇಣ್ಕೀ ಇಣ್ಕೀ ನೋಡ್ತಾವರೇ
ಅಮ್ಮೀ ಬೋ ಪಸಂದಾಗದೆ ಗಂಡು
ಹ್ವಾದ್ ಸಲ ಬಂದಿದ್ ಗಂಡ್ ಬುಟ್'ಬುಟಲ
ಹಂಗ್ ಮಾಡ್ಕೋಬ್ಯಾಡ ಅಂತನ್ನಬೇಕಾ

ಅಯ್ಯೋ ಕೋಳಿ ಕೇಳಿ ಮಸಾಲೆ ಅರ್ದರಾ
ಸುಮ್ಕಿರ್ರಮ್ಮಿ ಅಂತ ಒಳೀಕ್ ಬಂದ್ರೆ 
ನೆಂಟ್ರ್ ಲಗ್ಣ ಮುಗಸ್ ಬಂದ್ದಿದ್ ನಮ್ಮ್ ದೊಡ್ಡಣ್ಣ
ಬಂದೋರ್ಗೆ ಮಾತ್ ಕೊಡ್ತಾ ಇದ್ರು ಅಪ್ಪನ ವರ್ಷ್'ದ್ ದಿನದೊಳಗೆ ಲಗ್ಣ ಮಾಡ್ಕೊಡ್'ತೀವ್ ಬುಡೀ

ವೈಲೇಶ ಪಿ ಯೆಸ್ ಕೊಡಗು
೧/೫/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು