ನವ ಶಕುನಿಗಳು
ನವ ಶಕುನಿಗಳು
~~~~~~~~~
ಮುಂದುವರಿದಿದೆ ಶಕುನಿ ಸಂತತಿ
ತಾನರಿಯದೆಯೆ ತನ್ನವರಧೋಗತಿ
ಮುಗ್ಗರಿಸಿದರೆ ಶನಿ ಪಿನಕವಾಗುತಿ
ಕಳೆದುಕೊಳ್ಳದಿರಿ ತಮ್ಮಯ ಮತಿ
ಅಗುಳಗಳ ಎಸೆದು ಶಿಕ್ಷಿಸಿದರಂದು
ಎಷ್ಟೆಣಿಸಿದರೂ ಅಗುಳನು ತಿಂದು
ಬದುಕಲಾಗದು ತಲೆಗೊಂದು ಎಂದು
ಶಕುನಿಗಿಕ್ಕಿದರು ಹಗೆ ಬೆರೆಸಿ ತಂದು
ತರ್ಪಣವೀದು ಸೋದರ ಸಂಕುಲಕೆ
ಆರರಿಯದೇ ಸೇರಿಕೊಳ್ವೆ ಕುರುಕುಲಕೆ
ನೆತ್ತರ ನದಿಯು ಕುರುಕ್ಷೇತ್ರ ರಣರಂಗಕೆ
ಸೊಬಗದಿ ಮೋಸಗೈದೆ ಶತ್ರು ವಿನಾಶಕೆ
ನಿಜ ಶಕುನಿಗಂದು ಸೋದರ ವಾತ್ಸಲ್ಯ
ನವ ಶಕುನಿಗಳಿಗೆ ಮೋಹವೇ ವೈಫಲ್ಯ
ಪ್ರಶಸ್ತಿ ನಿಂದನೆಗಳು ನೀಡದು ಪ್ರಾಬಲ್ಯ
ನಿಷ್ಠೆಯಿಂದ ಪಡೆಯಿರಿ ಜೀವನ ಸಾಫಲ್ಯ
ವೈಲೇಶ ಪಿ ಯೆಸ್ ಕೊಡಗು
೨೨/೪/೨೦೧೮
Comments
Post a Comment