ಮನೆಯಲ್ಲಿ ಅವಳಿಲ್ಲ

ಮನೆಯಲ್ಲಿ ಅವಳಿಲ್ಲ
~~~~~~~~~~~
ಅಪ್ಪ ಅಮ್ಮ ತಮ್ಮ ತಂಗಿ
ಇದ್ದರೂ ಅಂದೂ ನನಗೆ
ಎಲ್ಲರ ಪ್ರೀತಿಯ ಜೊತೆಗೆ
ಬಿದ್ದೆನು ಮಡದಿ ಪ್ರೀತಿಗೆ

ಹೆತ್ತವರು ಅಗಲಿದರು
ಒಡಹುಟ್ಟು ಕರಗಿದರು
ಎಲ್ಲರೂ ಅಗಲಿ ಕೊನೆಗೆ
ನಡೆದು ಬಿಟ್ಟರು ಗಾಳಿಗೆ

ಮೊದಲ ಹೆರಿಗೆ ನಮ್ಮನೆಯಲ್ಲೇ
ಎರಡನೇ ಹೆರಿಗೆಗೆ ಅತ್ತೆ ಊರಲ್ಲೆ
ನಿತ್ಯವೂ ಪ್ರಯಾಣ ಅಲ್ಲಿಂದಲೇ
ಮಕ್ಕಳನು ಕರೆದೊಯ್ದೆ ಜತೆಯಲ್ಲೆ

ಎಂದೂ ನನ್ನ ಬಿಟ್ಟು ತವರಿಗೂ
ಹೋಗದೇ ಇಂದು ಹೋಗಿಹಳು
ನವವಿವಾಹಿತರ ಕರೆತರಲು
ಮನೆಯೆಲ್ಲಾ ಎನಲು ಬಿಕೋ
ಮನದಲ್ಲಿ ದುಗುಡ ಏಕೋ
..........................................

ವೈಲೇಶ ಪಿ ಯೆಸ್ ಕೊಡಗು
೨೬/೪/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು