ಅವನಲ್ಲ ಸಖ

ಅವನಲ್ಲ ಸಖ
~~~~~~~
ಮೊಗದಲಿ ನಗೆಯ ಮಂದಹಾಸವಿದೆ
ಮನದಲಿ ಯಾತನೆ ತುಂಬಿ ನಿಂತಂತಿದೆ
ಉದರದ ಕಿಚ್ಚದು ಅತ್ತಿತ್ತ ಎಡತಾಕುತಿದೆ
ಹುಡುಗು ಬುದ್ದಿಯ ಮಕ್ಕಳ ದೇನಿಸುತಿದ್ದೆ.

ದೈನೇಶಿಯವನ ದುಃಖಿತ ಮೊರೆ ಬವಣೆ
ಎಡಬಿಡದೆ ನಡೆದ ಆರೋಗ್ಯ ತಪಾಸಣೆ
ನುಂಗಿದೆ ಕ್ಷಣಕ್ಷಣ ಸಖನ ಜತೆ ಸಂಪಾದನೆ
ಎಲ್ಲಿಗೆ ಕೊಂಡೊಯ್ಯುದೋ ಜನ್ಮದ ಕೊನೆ

ಒಡಲ ಹಸಿವಿಗೆ ನುಡಿಯಲಾರದ ಕಂದಗೆ
ಹಾಲು ನೀಡದೇ ತಡೆಯದಾಗಿದೆ ಹೆಣ್ಣೆದೆಗೆ
ಬಿರಿದು ಹರಿದು ಮಗುವಿನ ಅಹಾರ ಕಣ್ಣಿಗೆ
ಬಿತ್ತವನ ಮನಗೊಂಡಿಹನು ಹಬ್ಬ ಇಂದೆನಗೆ

ನಿಜದ ಬಾಳ್ವೆಯ ಬದಲು ಬಲವಂತ ಸುಖ
ಕೇಳುವವರಾರಿಲ್ಲ ಬದುಕಿನ ಸುಖ-ದುಃಖ
ಬಂದವರಾರು ನೋಡರು ಸೋತ ಮುಖ
ಅಂಗಾಂಗ ಸಂಗವಲ್ಲದೇ ಅವನಲ್ಲ ಸಖ

ಮೋಹದಾ ಮೋದವಿಂದು ತಂದಿತ್ತ ಪರಿ
ವಿಕಾರ ವಿಧಿಯ ಅಟ್ಟಹಾಸವೇ ಎನಗೆ ಅರಿ
ಹೊಣೆಯರಿತು ಸವೆಸಬೇಕಿದೆ ನವ ಸಂಸಾರಿ
ರೋಗ ರುಜಿನಗಳಿಂದ ಕಾಯೋ ಶ್ರೀ ನರಹರಿ

ವೈಲೇಶ ಪಿ ಯೆಸ್ ಕೊಡಗು
೨೬/೪/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು