ಕಮ್ಮಟ
ಅದೊಂದು ಅಪರೂಪದ ಅಪೂರ್ವ ಅನುಭವ. ಇಲ್ಲಿಯವರೆಗೆ ಕೇವಲ ನಾಲ್ಕು ಜನ ಕುಳಿತು ಮಾಡುವ ಕವಿಗೋಷ್ಟಿಯಿಂದ ಮೊದಲ್ಗೊಂಡು ಜಿಲ್ಲಾ ಮಟ್ಟದ ರಾಜ್ಯ ಮಟ್ಟದ ರಾಷ್ಟ್ರ ಮಟ್ಟದ ಕವಿಗೋಷ್ಟಿಯಲ್ಲಿ ಭಾಗವಹಿಸಿದ ಅನುಭವ ಮಾತ್ರ ಇತ್ತು.
ಆದರೆ ದಿನಾಂಕ ೧೪/೪/೨೦೧೮ರಿಂದ ೧೫/೪/೨೦೧೮ ರವರೆಗೆ ನಮ್ಮ ಬಳಗ ಅಂದರೆ #ಸಮರ್ಥ_ಕನ್ನಡಿಗರು ವತಿಯಿಂದ ನಡೆದ #ವಿಶ್ವ_ಕನ್ನಡ_ಕಾವ್ಯ_ಕಮ್ಮಟದ ಅನುಭವ ನಿಜವಾಗಿಯೂ ಅದೊಂದು ಅವಿಸ್ಮರಣೀಯ ಅನುಭವ ಎನ್ನಬಹುದು ಅದರ ಉದ್ಘಾಟನೆಗೆಂದೇ ಸೈಕಲ್ ಕವಿ ಎಂದೇ ನಾಮಾಂಕಿತರಾದ ಸುಮಾರು ೪೦೦೦೦ ಕವಿತೆಗಳನ್ನು ಬರೆದು ಬರೆದು ಸುಮಾರು ೨೦೦೦೦ ಹಾಡುಗಳಾಗಿ ಪರಿವರ್ತನೆ ಹೊಂದಿ ನಲ್ವತೈದಕ್ಕೂ ಹೆಚ್ಚು ಪುಸ್ತಕ ಪ್ರಕಟಿಸಿದವರು ೧೧ನೇ ದಾರವಾಡ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಕರಾಗಿದ್ದ ಡಾ|| ವಿ ಸಿ ಐರಸಂಗ ಇವರು ಆಗಮಿಸಿದ್ದರು.
ಬಾಗಲಕೋಟೆ ಜಿಲ್ಲೆಯ ಸಿದ್ದಪ್ಪ ಸಾಬಣ್ಣ ಬಿದರಿ ಇವರು ಅಶು ಕವಿಗಳು ಶಾಲೆಯ ಮೆಟ್ಟಿಲು ಹತ್ತದ ಕೇವಲ ಸಹಿ ಮಾಡುವಷ್ಟು ಅಕ್ಷರ ಕಲಿತಿರುವ ಇವರು ಪಟಪಟನೆ ಅರಳು ಹುರಿದಂತೆ ಕವನಗಳನ್ನು ಹಾಡುಗಳನ್ನು ಹೇಳುವ ರೀತಿಗೆ ನಿಬ್ಬೆರಗಾಗದವರಿಲ್ಲ. ಮಹಂತಪ್ಪ ಮೇಟಿಗೌಡ ಅಮರಾವತಿ ಹಾಗೂ ಪದ್ಮಶ್ರೀ ಪ್ರಶಸ್ತಿ ವಿಜೇತ ಡಾ| ದೊಡ್ಡರಂಗೇಗೌಡರು ಇಂತಹ ವ್ಯಕ್ತಿಗಳ ಸಾಂಗತ್ಯ.
ತನ್ನ ಮಾತೃಭಾಷೆ ಬೇರೇಯೇ ಆದರೂ ಅತ್ಯಂತ ಸ್ಪುಟವಾಗಿ ಕನ್ನಡದ ಹಾಡುಗಳನ್ನು ಹಾಡುವ ಕಾಸರಗೋಡಿನ ಮಿತ್ರ ಮಹಮ್ಮದ್ ನೌಷಾದ್ ಮೊದಲ ಕವಿತೆಗಳಿಗೆ ಸಾಕ್ಷಿಯಾದ ಲಕ್ಕೂರು ಆನಂದ್, ಚಂದ್ರಶೇಖರ ಮಾಡಲಗೇರಿ, ಕೆ ಎಮ್ ವಿಶ್ವನಾಥ್, ಗುಂಡಿಗೆರೆ ವಿಶ್ವನಾಥ್, ಗಡಿಬಿಡಿಯಲ್ಲಿ ಬಂದೋಡಿದ ಡಾ| ವಾದಿರಾಜ್ ಇವರೆಲ್ಲರ ಒಡನಾಟ ಹಿತ ನೀಡಿತು.
ಇನ್ನು ಕಾವ್ಯಯಾನದಲ್ಲಿ ನವೋದಯ ಕಾವ್ಯದ ರಾಚನಿಕ ನೆಲೆಗಳ ಬಗ್ಗೆ ಅದ್ಭುತವಾಗಿ ಮಾತನಾಡಿದ ಡಾ| ಕಾ ವೆಂ ಶ್ರೀನಿವಾಸ ಮೂರ್ತಿಯವರು, ತಿಳಿಸಿದ ಮಾತ್ರ ಗಣ ಪಾದಗಳು ಮನ ಮುಟ್ಟಿತು.
ಪದ್ಮಶ್ರೀ ಪದ್ಮಭೂಷಣ ಡಾ| ವೈರಮುುತ್ತುರವರ ಕವಿತೆಗಳು ಹಾಗೂ ಸಾಹಿತ್ಯ ಅನುಸಂಧಾನದ ಬಗ್ಗೆ ಮಾತನಾಡಿದ ಮೂಲತಃ ತಮಿಳು ಮಾತೃಭಾಷೆಯ ಕನ್ನಡ ಪ್ರಾಧ್ಯಾಪಕರಾದ ಮಲರ್ ವಿಳಿಯವರ ಕನ್ನಡ ನುಡಿಮುತ್ತುಗಳ ಓಘಕ್ಕೆ ನಾವೆಲ್ಲರೂ ಕೊಚ್ಚಿ ಹೋದುದು ಅಕ್ಷರಶಃ ಸತ್ಯ. ಕನ್ನಡ ಮಟ್ಟುಗಳು ಹಾಗೂ ಕಾವ್ಯ ರಚನೆ ಬಗ್ಗೆ ಸಂಗೀತ ವಿದ್ವಾನ್ ಅಮೃತ ಗೌಡ ಶಾಡಲಗೇರಿ ಇವರ ಹಳೆಗನ್ನಡ ಕೇಳುತ್ತಿದ್ದರೆ ಇನ್ನೂ ಕೇಳಬೇಕಿನಿಸಿತು.
ಜಾನಪದ ಕಾವ್ಯ ಸಿರಿ ಬಗ್ಗೆ ಉತ್ತಮ ದರ್ಜೆಯ ಹಾಡುಗಳನ್ನು ಹಾಡಿ ಅಭಿನಯಿಸುತ್ತಾ ವಿವರಿಸಿದ ವೆಂಕನಗೌಡ ವಟಗಲ್ ರ ಉಪನ್ಯಾಸ ಮಧುರ ಮಧುರ.
ಪ್ರೀತಿ ಇಲ್ಲದ ಮೇಲೆ ಹಾಡು ಹುಟ್ಟೀತು ಹೇಗೆ? ಇದರ ವಿಚಾರದಲ್ಲಿ ಡಾ| ಬಿ ಎ ಅನ್ನದಾನೇಸ್ ಅದ್ಭುತ ವಿವರಣೆ ನೀಡಿದರು. ಕರ್ಣಾಟ ಭಾರತ ಕಥಾ ಮಂಜರಿ ನಾಂದಿ ಪದ್ಯಗಳು ಗಮಕ ಗಾಯನ ಹಾಗೂ ವ್ಯಾಖ್ಯಾನ ಸುಂದರವಾಗಿ ಮೂಡಿ ಬಂತು. ವೃತ್ತಗಳು ಮತ್ತು ಕಾವ್ಯ ರಚನೆ ವಿಚಾರ ಅಮೃತ ಗೌಡರ ಮತ್ತೊಂದು ಬಾರಿ ಮನ ಗೆದ್ದರು. ಅದ್ಭುತ ಮಾತುಗಾರಿಕೆ ಉಳ್ಳ ರೇಣುಕ ವೈಕುಂಠಯ್ಯ ಇವರ ಕನ್ನಡದೊಲವು ಸಮಯಕ್ಕೆ ತಕ್ಕಂತೆ ಪುಸ್ತಕ ಪ್ರಸ್ತುತಿಯನ್ನು ಮಾಡಿ ನೀಡಿದ ಉಪನ್ಯಾಸ ಅದ್ಭುತ ಅದ್ಭುತ.
ನಿಜ ಹೇಳಬೇಕೆಂದರೆ ಡಾ| ಪ್ರೇಮ ಸಿದ್ದರಾಜು ಮಹಿಳಾ ಸಾಹಿತ್ಯ ಸಂವೇದನೆ ನೆನಪಿನಲ್ಲಿ ಉಳಿಯುವಂತಿತ್ತು. ಪ್ರಶ್ನೆಗೆ ತಕ್ಕಂತೆ ಉತ್ತರ ಕೂಡ ಅಲ್ಲಿತ್ತು.
ಕಾವ್ಯ ವಾಚನದ ಆಯಾಮಗಳನ್ನು ಉದಾಹರಣೆ ಪೂರ್ವಕವಾಗಿ ವಿವರಿಸಿ ಮನದಟ್ಟು ಮಾಡಿದರು. ಗೆಳೆಯರಾದ ಶ್ರೀಯುತ ಕೃಪಾ ಮಂಜುನಾಥ್ ಗಮಕ ಉಪನ್ಯಾಸಕರು ಇವರ ನುಡಿಗಳು ಜೇನಿನ ಹೊಳೆಯಂತೆ ಸವಿದಷ್ಟೂ ಸವಿರುಚಿ ಅಲ್ಲವೇ.
ಇನ್ನು ಸಾಹಿತ್ಯ ಕ್ಷೇತ್ರದಲ್ಲಿ ಬಿಂದುವಿನಿಂದ ಅನಂತದೆಡೆಗೆ ಸಾಗುತ್ತಿರುವ ಗೆಳೆಯರಾದ ಲಿಂಗೇಶ್ ಹುಣಸೂರು ಇವರ ಕವನ ವಾಚನ ನನ್ನ ಇದುವರೆಗಿನ ಕವನ ವಾಚನದ ಬಗೆಗಿದ್ದ ಸಂಶಯವನ್ನು ಒಂದೇ ಒಂದು ಕವನ ವಾಚನದಲ್ಲಿ ನಿವಾರಿಸಿತು. ಕಾರ್ಯಕ್ರಮದ ಮೇಟಿಗಳಾದ ಗೆಳೆಯ ಮೇಟಿಗೌಡ ಬಸವರಾಜ್ ಕಲ್ಲು ಸಕ್ಕರೆ, ಸಂತೋಷ್,ದೊರೆ ಸ್ವಾಮಿ,ವೀಣಾ ತುಮಕೂರು ಜಯಲಕ್ಷ್ಮಿ ಕೆ ಕುಮಾರ್, ಇನ್ನೂ ಅಸಂಖ್ಯಾತ ಗೆಳೆಯರ ಬಳಗ ಅನಂದವೀ ಶುಭ ಸಮಯ.
ಇನ್ನು ಸಮರ್ಥ ಕನ್ನಡಿಗರು ಪ್ರಶಸ್ತಿಗೆ ಭಾಜನರಾದವರು ಕೊಡಗಿನ ಚುಟುಕು ಸಾಹಿತಿಗಳು ಮಿತ್ರಾತ್ಮೀಯರು ಆದ ಹಾ.ತಿ. ಜಯಪ್ರಕಾಶ್ ಹಾಗೂ ಕೊಡಗಿನ ಕುವರಿ ಯುವ ಪ್ರತಿಭೆ ಕುಮಾರಿ ಮೌನ ವಿ.ಜೆ. ಹಾಗೂ ಅಷ್ಟೆಲ್ಲಾ ಪಾಂಡಿತ್ಯವಿದ್ದರೂ ಮೌನಗೌರಿಯಂತೆ ಎಲ್ಲರೊಂದಿಗೆ ಆಪ್ತ ಗೆಳತಿಯಂತೆ ನನಗೆ ಮೊದಲ ಪರಿಚಯವಾದರೂ ಒಡಹುಟ್ಟಿದ ಸಹೋದರಿಯಂತಹ ಭಾಗ್ಯ ಮಂಡ್ಯ. ಆಯೋಜಕರಿಗೆ ನಿಜವಾಗಿಯೂ ಧನ್ಯವಾದ ಹೇಳಬೇಕು ಉತ್ತಮ ಆಯ್ಕೆಯ ವಿಚಾರಕ್ಕೆ.
ಫೇಸ್ ಬುಕ್ ಗೆಳತಿಯಾದ manu Jagadish ರವರ ಆಗಮನ ಸಂತಸ ತಂದಿದೆ. ಇತರೆ ಎಲ್ಲಾ ಹೊಸ ಹಳೆಯ ಗೆಳೆಯರು ಸಹೋದರ ಸಹೋದರಿಯರು ನಿಜಕ್ಕೂ ಮನದೊಳಗೆ ಮತ್ತೆ ಇಳಿದರು. ಒಟ್ಟಾರೆ ಹೇಳುವುದಾದರೆ ಇಂತಹ ಒಂದು ಅದ್ಭುತ ಕಾರ್ಯಕ್ರಮ ಅದರಲ್ಲಿ ಭಾಗವಹಿಸುವ ಮೂಲಕ ಕಲಿಕೆಗೆ ಮುಂದಾದ ಎಲ್ಲಾ ನನ್ನ ಮಿತ್ರಾತ್ಮೀಯರಿಗೆ ಅನಂತ ಧನ್ಯವಾದಗಳು. ಇನ್ನು ಮುಂದೆ ಸಹ ನಾವೆಲ್ಲರೂ ಜೊತೆಗೂಡಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಲಿಯುತ್ತಾ ಕಲಿಸುತ್ತಾ ಮುಂದೆ ಮುಂದೆ ನಡೆಯುವ ಗೆಳೆಯರೇ
ಎಲ್ಲರ ಹೆಸರನ್ನು ಸೂಚಿಸಲು ಸಾಧ್ಯವಾಗಿಲ್ಲ ಯಾರೂ ಅನ್ಯಥಾ ಭಾವಿಸದಿರಿ. ತಾವೆಲ್ಲರೂ ನನ್ನ ಮನದೊಳಗೆ ಅಡಕವಾಗಿದ್ದೀರಿ
ನಿಮ್ಮವ
ವೈಲೇಶ ಪಿ ಯೆಸ್ ಕೊಡಗು
ಚಾಲಕರು ಕರಾರಸಾಸಂಸ್ಥೆ ಮಡಿಕೇರಿ ಘಟಕ
ಪುತ್ತೂರು ವಿಭಾಗ
೧೬/೪/೨೦೧೮
Comments
Post a Comment