ಜಗದ ಅಣ್ಣ

ಜಗದ ಅಣ್ಣ ಭೀಮಣ್ಣ
~~~~~~~~~~~~
ಊರು ಕೇರಿಯೊಳಗೆ ಬಿಡದವರಂದು
ಕೇರಿ ಮನೆ ಮನೆಯೊಳಗೆ ಬಂದರಿಂದು
ಮುಗಿದು ಕರವನು ನಮ್ಮೆದುರು ನಿಂದು
ಮನವಿ ಮಾಡುತಿಹರು ಮತವ ನೀಡಿರೆಂದು

ನೀರು ನೆರಳಿಗೆ ಅಂದು ಕೂಡದವರು
ನೀರು ನೆರಳದು ಮೊದಲು ನಿಮಗೆಂಬರು
ಸಕಲಕೂ ಆಧ್ಯತೆಯು ನಿಮಗೆಂದಿಹಿರು
ನಾವೆಲ್ಲಾ ಒಂದೆಂದು ಇಂದು ಉಸುರುತಿಹರು

ವಿದ್ಯೆಯ ಕಲಿಸಲು ಒಪ್ಪದವರಂದು
ವಿದ್ಯೆಗೆ ಮಂದಿರವನೇ ಕಟ್ಟಿಸಿಹರಿಂದು 
ನಿಮ್ಮದೇ ಹೆಸರಿನಲಿ ಧನ ಶೇಖರಣೆಗೆಂದು
ಜಾತಿ ಧರ್ಮದ ಭೇದವ ಬಿಟ್ಟಿರುವೆವೆಂದು 

ಹಳೆಯ ವಿಧಾನವನು ಮರೆತು ನಿಂತಿಹರು
ಹೊಸತು ಸಂವಿಧಾನವ ಅರಿತು ಪಾಲಿಸಲು
ನಿತ್ಯದ ಕಲಿಕೆಯದು ನೀಗಿತು ಅಸಮಾನತೆ
ಇದೋ ಜಗಮೆಚ್ಚುವ ನಿಮಗೆ ಅಭಿನಂದನೆ

ಸುಮ್ಮಗೆ ಬರಲಿಲ್ಲ ಅಸಾಮಾನ್ಯ ವಿದ್ವತ್ತು
ತೊರೆದು ಸುಖವನು ಮೀಸಲು ವಿದ್ಯೆಗಿತ್ತು
ಸಂಸಾರ ಎಂದೆಂದೂ ಬಡತನ ಹೊದೆದಿತ್ತು
ಇಂದಿಗೆ ಜಗಕ್ಕೆಲ್ಲಾ ಅಣ್ಣ ನೀನಾದೆ ಎಂದಿತ್ತು

ವೈಲೇಶ ಪಿ ಯೆಸ್ ಕೊಡಗು
೧೯/೪/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು