ರೋಮಾಂಚನ ವಿಮರ್ಶೆ
ರೋಮಾಂಚನ
~~~~~~~~
ದೂರ ತೀರವ ದಾಟಿ ಬಂದಿಹೆನು
ಯಾರ ಹಂಗನು ಮೀರಿ ನಿಂದಿಹೆನು
ಮೇಲಿರುವ ತಾ ಕಾಣದ ಅಂಬಿಗನು
ಕಷ್ಟ ಸುಖವನೆದುರಿಸುವ ಛಲದಿಹೆನು
ಮೇಲಿನ ಪ್ಯಾರಾ ಇಡಿಯಾಗಿ ತೆಗೆದುಕೊಂಡರೆ ಸರಿಯಾದ ಅರ್ಥ ತಮಗೆ ಸಿಗುತ್ತದೆ.
ಈ ಪ್ಯಾರ ಹೆಣ್ಣಿನ ಸ್ವಾತಂತ್ರ್ಯವನ್ನು ಬಿಂಬಿಸುತ್ತದೆ
ಅಂದರೆ ಬಾಳ ಪಯಣದಲ್ಲಿ ಬಹು ದೂರ ಬಂದಿರುವೆನು ಎಂತಲೂ, ಕಡಲ ನಡುವೆ ದೋಣಿ ಯಾನದಲ್ಲಿ ಬಹುತೇಕ ದೂರ ಬಂದಿರುವೆನು ಎಂತಲೂ, ಆಕೆ ದೋಣಿಯ ಮುಂಭಾಗದಲ್ಲಿ ಹಕ್ಕಿಯಂತೆ ಸ್ವತಂತ್ರವಾಗಿ ಯಾರ ಹಂಗಿಲ್ಲದೇ ನಿಂತಿರುನೆಂತಲೂ, ಮೇಲಿರುವ ದೇವನು ನನ್ನ ಬಾಳ ದೋಣಿಯ ಅಂಬಿಗನು ಎಂತಲೂ, ಇಲ್ಲಿಯವರೆಗೆ ಬಂದಾಗಿದೆ ಇನ್ನಾವ ಕಷ್ಟ ಸುಖವನ್ನು ಎದುರಿಸಲು ಸಜ್ಜಾಗಿರುವೆನು,ಅಥವಾ ಕಷ್ಟ ಸುಖವನ್ನು ಎದುರಿಸಲು ಅನುಭವ ಹೊಂದಿರುವೆನೆಂದೂ ಹೇಳುವುದನ್ನು ನಾಲ್ಕು ಗೆರೆಯಲ್ಲಿ ಮುಗಿಸಲಾಗಿದೆ. ಇನ್ನೂ ಇದರ ಆಳಕ್ಕೆ ಇಳಿದು ಹೋದಂತೆಲ್ಲಾ ಈ ನಾಲ್ಕು ಸಾಲುಗಳನ್ನು ಒಂದು ಕಾದಂಬರಿ ಮಾಡಬಹುದು ವೈದ್ಯ ಮಿತ್ರಾತ್ಮೀಯರೆ. ಅದೇ ಕವನದ ವಿಸ್ತೃತ ರೂಪ. ಅದಕ್ಕಾಗಿ ಯಾವ ಕವಿಯು ತಮ್ಮ ಕವನಗಳಿಗೆ ಯಾವುದೇ ಸೂಚಕಗಳನ್ನು ಹಾಕಬಾರದು. ಹಾಗೂ ಸ್ವ ವಿಮರ್ಶೆ ಮಾಡಬಾರದು. ವಿಮರ್ಶೆ ಮಾಡಿದರೆ ಕವನವನ್ನು ಅದರ ಭಾವಗಳನ್ನು ಕೊಂದಂತೆ. ಕವನಗಳಿಗೆ ಬಳಸುವ ಒಂದು ಪದವು ನೂರು ಜನ ನೋಡಿದಾಗ ನೂರು. ಮಾತುಗಳನ್ನು ಆಡುತ್ತವೆ. ನಾವು ಸೂಚಕಗಳನ್ನು (ಅಂದರೆ ಕಾಮ , ಅಥವಾ ಪ್ರಶ್ನಾರ್ಹ ಚಿಹ್ನೆಗಳನ್ನು ಬಳಸಿದಾಗ ಓದುಗರ ಭಾವನೆಗಳನ್ನು ಸೀಮಿತಗೊಳಿಸಿದಂತೆ)
ಉದಾಹರಣೆಗೆ ಮೇಲಿನ ಕವಿತೆಗೆ ಬಳಸಿದ ಚಿತ್ರವನ್ನು ನೋಡಿದ ಕವಿತೆಗಳು ಒಬ್ಬೊಬ್ಬರ ಮನದಲ್ಲಿ ಒಂದೊಂದು ಭಾವನೆಗಳು ಮೂಡಿರುವುದೇ ಸಾಕ್ಷಿ.
ಇನ್ನೆರಡು ಪ್ಯಾರಗಳು ಕ್ಷಣಿಕ ಸಂತಸ ಸ್ಥಳದ ಮಹಿಮೆಯನ್ನು ಪುಳಕವನ್ನು ತೋರುತ್ತದೆ.
ನೀರವ ರಾತ್ರಿಯಲ್ಲಿ ಮಾಧವನ ಬಯಕೆ
ಮಾಧವನೆಂದರೆ ಇನಿಯ ಗೆಳೆಯ ಪತಿ ಹೀಗೆ.
ಅಂವ ಇದನ್ನು ಕೂಡ ಆ ಪ್ಯಾರವನ್ನು ಓದಿ ಎಲ್ಲವನ್ನೂ ನಾವೇ ಹೇಳುವುದಾದರೆ ಕವನ ಬಿಟ್ಟು ಕತೆ ಬರೆಯಬೇಕಾಗುತ್ತದೆ.
ನೀರವ ರಾತ್ರಿಯಲಿ ಮಾಧವನ ಬಯಕೆ
ಅದೇನೋ ಎಂದಿಲ್ಲದ ವಿರಹಾಗ್ನಿ ಇದೇಕೆ
ಏನಾದರಾಗಲಿ ಮನ್ನಿಸು ಎನ್ನ ಮನದಾಸೆ
ನೀನಿಲ್ಲದೇ ನಾನಿಲ್ಲವೆಂಬುದೇ ಮೀಮಾಂಸೆ
ಗುರುಗಳೇ ಕವಿತೆಗಳಲ್ಲಿ ಯಾವ ಪದಗಳನ್ನು ಕೂಡಿಸಿ ಬರೆಯಬಹುದು.
ಉದಾಹರಣೆಗೆ ಹಳೆಗನ್ನಡದ ತರಹ.
ಮೇಲಿರುವ ತಾ.. ಕಾಣದ ಅಂಬಿಗನು
ಅಂದರೆ ಅಂಬಿಗನಿಲ್ಲದ ನಾವೆಯಲಿ ಒಂಟಿ ಹೆಣ್ಣು ಆದ ಕಾರಣ ಹೀಗೆ ಬರೆದಿರುವೆ.
Comments
Post a Comment